ದೇಶ

ಐಸಿಎಂಆರ್ ನಿಂದ ದೇಶೀಯ ನಿರ್ಮಿತ 249 ಕೊರೋನಾ ಪರೀಕ್ಷಾ ಕಿಟ್‌ಗಳಿಗೆ ಮಾನ್ಯತೆ

Srinivasamurthy VN

ನವದೆಹಲಿ: ದೇಶೀಯ ನಿರ್ಮಿತ 249 ಕೊರೋನಾ ಪರೀಕ್ಷಾ ಕಿಟ್‌ಗಳಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾನ್ಯತೆ ನೀಡಿದೆ.

ಹೌದು..ವೈದ್ಯಕೀಯ ಉಪಕರಣಗಳ ತಯಾರಿಕೆಯಲ್ಲಿ ಸ್ವಾವಲಂಬನೆ (ಆತ್ಮನಿರ್ಭರ್) ಉತ್ತೇಜಿಸುವ ನಿಟ್ಟಿನಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಇದೀಗ 249 ಕೊರೋನಾ ಪರೀಕ್ಷಾ ಕಿಟ್‌ಗಳಿಗೆ ಮಾನ್ಯತೆ ನೀಡಿದ್ದು, ಆ ಮೂಲಕ ಐಸಿಎಂಆರ್ ಅನುಮತಿ ನೀಡಿದ ಪರೀಕ್ಷಾ ಕಿಟ್  ಗಳ ಸಂಖ್ಯೆ 382ಕ್ಕೆ ಏರಿಕೆಯಾಗಿದೆ. ಈ ಪೈಕಿ 249 ದೇಶೀಯ ನಿರ್ಮಿತ ಪರೀಕ್ಷಾ ಕಿಟ್ ಗಳಾಗಿವೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ, ಕೋವಿಡ್-19 ಪರೀಕ್ಷೆಗೆ ಇದುವರೆಗೆ 726 ವಿವಿಧ ಪರೀಕ್ಷಾ ಕಿಟ್‌ಗಳನ್ನು ಮೌಲ್ಯಮಾಪನ ಮಾಡಲಾಗಿದೆ. ಈ ಪೈಕಿ 382 ಪರೀಕ್ಷಾ ಕಿಟ್‍ಗಳಿಗೆ ಮಾನ್ಯತೆ ನೀಡಲಾಗಿದ್ದು, ಇವುಗಳಲ್ಲಿ 249  ದೇಶೀಯವಾಗಿ ತಯಾರಿಸಲ್ಪಟ್ಟಿದ್ದಾಗಿವೆ. ಪರೀಕ್ಷಾ ಕಿಟ್‌ಗಳನ್ನು ದೇಶೀಯವಾಗಿ ತಯಾರಿಸಿದ್ದರಿಂದ ಅವುಗಳ ವೆಚ್ಚ ಗಣನೀಯವಾಗಿ ಕಡಿಮೆಯಾಗಿದ್ದು, ಹೆಚ್ಚಿನ ಖರೀದಿಗೆ ಕಾರಣವಾಗಿದೆ. ಇದು ಕರೋನಾ ಪರೀಕ್ಷೆಗಳಲ್ಲಿ ಪರೀಕ್ಷಾ ವೇಗವನ್ನು ಹೆಚ್ಚಿಸಲು ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ. 

ಅಂತೆಯೇ ಈ ವರೆಗೂ ಐಸಿಎಂಆರ್ 726 ವಿವಿಧ ಬಗೆಯ ಕೊರೋನಾ ಪರೀಕ್ಷೆ ಕಿಟ್ ಗಳನ್ನು ಮೌಲ್ಯಮಾಪನ ಮಾಡಲಾಗಿದ್ದು, ಈ ಪೈಕಿ 382 ಪರೀಕ್ಷಾ ಕಿಟ್‍ಗಳಿಗೆ ಮಾನ್ಯತೆ ನೀಡಲಾಗಿದೆ. ಇದರಲ್ಲೂ 249 ಪರೀಕ್ಷಾ ಕಿಟ್ ಗಳು ದೇಶೀಯ ನಿರ್ಮಿತವಾದದ್ದು. ವಿದೇಶಿ ಕಿಟ್ ಗಳಿಗೆ ಹೋಲಿಕೆ ಮಾಡಿದರೆ  ದೇಶೀಯ ನಿರ್ಮಿತ ಪರೀಕ್ಷಾ ಕಿಟ್ ಗಳ ದರಗಳು ಗಣನೀಯವಾಗಿ ಕಡಿಮೆ ಇದೆ. ಹೀಗಾಗಿ ಇವುಗಳ ಮಾರಾಟ ಅಥವಾ ಬಳಕೆ ಹೆಚ್ಚಿನ ಪ್ರಮಾಣದಲ್ಲಾಗುವ ನಿರೀಕ್ಷೆ ಇದೆ. ಇದರಿಂದ ಹೆಚ್ಚೆಚ್ಚು ಪರೀಕ್ಷೆ ನಡೆಸಲು ಅನುಕೂಲವಾಗುತ್ತದೆ ಎಂದು ಬಲರಾಮ್ ಭಾರ್ಗವ್ ಹೇಳಿದ್ದಾರೆ.

SCROLL FOR NEXT