ದೇಶ

ಮೂರು ತಿಂಗಳೂಳಗೆ ಕಾಂಗ್ರೆಸ್ ಗೆ ಹೊಸ ಅಧ್ಯಕ್ಷರು: ಪಿ. ಚಿದಂಬರಂ

Srinivasamurthy VN

ನವದೆಹಲಿ: ಮುಂದಿನ ಮೂರು, ನಾಲ್ಕು ತಿಂಗಳೊಳಗೆ ಎಐಸಿಸಿ ಚುನಾವಣೆ ನಡೆಯಲಿದ್ದು. ಆ ಪ್ರಕ್ರಿಯೆ ಪೂರ್ಣಗೊಂಡ ನಂತರ ನೂತನ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಲಿದ್ದೇವೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಹೇಳಿದ್ದಾರೆ.

ಪ್ರಸ್ತುತ ಕೊರೊನಾ ಸಾಂಕ್ರಾಮಿಕ ಕಾರಣ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಅಧ್ಯಕ್ಷ ಸ್ಥಾನಕ್ಕೆ ಗಾಂಧಿ ಕುಟುಂಬ ಸದಸ್ಯರನ್ನು ಹೊರತುಪಡಿಸಿ ಬೇರೆ ನಾಯಕರು ಕಾಣಿಸುತ್ತಿದ್ದಾರೆಯೇ ? ಎಂಬ ಪ್ರಶ್ನೆಗೆ ಬುತ್ತರಿಸಿದ ಅವರು, ಇಡೀ ವಿಷಯವನ್ನು ಸಮಗ್ರವಾಗಿ  ಅರ್ಥಮಾಡಿಕೊಂಡಿದ್ದೇವೆ. ಅದರಿಂದ ಹೊರಬರಲು ಹೊಸ ಮಾರ್ಗ ಕಂಡುಕೊಳ್ಳಲಿದ್ದೇವೆ ಎಂದು ಹೇಳಿದರು. ಕೊರೊನಾ ಸಮಯವಾಗಿರುವ ಕಾರಣ ... ಸ್ವಲ್ಪ ದಿನಗಳ ಕಾಲ ಕಾಯುವ ಅಗತ್ಯವಿದೆ ಎಂದು ಚಿದಂಬರಂ ನುಡಿದಿದ್ದಾರೆ.

ಅವರು ರಾಷ್ಟ್ರೀಯ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಸಕ್ರಿಯವಾಗಿಲ್ಲ ಎಂಬುದು ಸಂಪೂರ್ಣ ಅವಾಸ್ತವ ಎಂದು ಹೇಳಿದ ಅವರು ಸೋನಿಯಾ, ರಾಹುಲ್ ಗಾಂಧಿ ಸಂಪೂರ್ಣವಾಗಿ ಸಕ್ರಿಯವಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು. ಆದರೆ,  ಕೊರೊನಾ ಸಾಂಕ್ರಾಮಿಕ ದಿಂದಾಗಿ ಜನರೊಂದಿಗೆ ಸೇರಲು ಸಾಧ್ಯವಾಗುತ್ತಿಲ್ಲ ಎಂದರು.

೨೦೦೪ ರಲ್ಲಿ ಬಿಜೆಪಿಯಲ್ಲೂ ಇದೇ ಪರಿಸ್ಥಿತಿ ಇತ್ತು. ಆಗ ಬಿಜೆಪಿಯನ್ನು ಮಾಧ್ಯಮಗಳು ಪ್ರಶ್ನಿಸಲಿಲ್ಲ. ಕಾಂಗ್ರೆಸ್ ದುರ್ಬಲಗೊಳ್ಳುತ್ತಿದೆ ಎಂದು ಟೀಕಿಸುತ್ತಿವೆ. ಮಾಧ್ಯಮಗಳು ಯಾವಾಗಲೂ ಪ್ರತಿಪಕ್ಷಗಳ ಪರವಾಗಿರಬೇಕು ಎಂದು ಚಿದಂಬರಂ ಸಲಹೆ ನೀಡಿದರು. ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಕಾರಣಗಳನ್ನು  ಪಕ್ಷ ಹಲವಾರು ಬಾರಿ ಚರ್ಚಿಸಿದೆ ಎಂದು ಅವರು ಹೇಳಿದರು. ಮೋದಿ ಹವಾ ಇದ್ದರೂ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ ಎಂದು ಚಿದಂಬರಂ ಹೇಳಿದರು.

SCROLL FOR NEXT