ದೇಶ

ಸುಶಾಂತ್ ಸಿಂಗ್ ಪ್ರಕರಣ: ಶವಾಗಾರಕ್ಕೆ ರಿಯಾ ಭೇಟಿ ಪ್ರಶ್ನಿಸಿದ ‘ಮಹಾ’ ಮಾನವ ಹಕ್ಕುಗಳ ಆಯೋಗ

Vishwanath S

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ, ಮಹಾರಾಷ್ಟ್ರ ರಾಜ್ಯ ಮಾನವ ಹಕ್ಕುಗಳ ಆಯೋಗ(ಎಂಎಸ್‌ಎಚ್‌ಆರ್‌ಸಿ) ಬುಧವಾರ ಮುಂಬೈ ಪೊಲೀಸ್ ಮತ್ತು ಬೃಹನ್ಮುಂಬೈ ಮಹಾನಗರ ಪಾಲಿಕೆಯಿಂದ ವಿವರಣೆಯನ್ನು ಕೋರಿದೆ.

ಈ ವಿಷಯದ ಬಗ್ಗೆ ಸ್ವಯಂಪ್ರೇರಿತವಾಗಿ ಪರಿಶೀಲನೆಗೆ ಮುಂದಾಗಿರುವ ಎಂಎಸ್‍ ಎಚ್‍ಆರ್ ಸಿ,  ಆಗಸ್ಟ್ 31ರೊಳಗೆ ಈ ಬಗ್ಗೆ  ವಿವರಣೆಯನ್ನು ಸಲ್ಲಿಸುವಂತೆ ಪೊಲೀಸ್ ಮತ್ತು ನಾಗರಿಕ ಅಧಿಕಾರಿಗಳಿಗೆ ಆದೇಶಿಸಿದೆ.

ರಿಯಾ ಚಕ್ರವರ್ತಿಯ ಜೂನ್ 14 ರಂದು ಆರ್ ಎನ್ ಕೂಪರ್ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ ವಿಡಿಯೋ ಮತ್ತು ಸುದ್ದಿ ವರದಿಗಳನ್ನು ಎಂಎಸ್‌ಎಚ್‌ಆರ್‌ಸಿ ಸೂಕ್ಷ್ಮವಾಗಿ ಗಮನಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸುಶಾಂತ್ ಅವರ ಗೆಳತಿ ರಿಯಾ ಚಕ್ರವರ್ತಿ ಅವರ ವಿಚಾರಣೆ ವೇಳೆ ಅವರ ವಾಟ್ಸ್ ಆಪ್ ಚಾಟ್ ಹಿಸ್ಟರಿಯಲ್ಲಿ ಡ್ರಗ್ಸ್ ಸಂಪರ್ಕ ಇರುವುದು ಬಹಿರಂಗಗೊಂಡಿದೆ. ಜ್ಹೀ ನ್ಯೂಸ್ ಪ್ರಕಟಿಸಿರುವ ವರದಿಯ ಪ್ರಕಾರ ಪ್ರಕರಣದಲ್ಲಿ ಡ್ರಗ್ಸ್ ಕಾನ್ಸ್ಪಿರೆಸಿ ತೆರೆದುಕೊಳ್ಳುತ್ತಿದೆ. ವಾಟ್ಸ್ ಆಪ್ ಚಾಟ್ ನಲ್ಲಿ ರಿಯಾ ಚಕ್ರವರ್ತಿ ಡ್ರಗ್ಸ್ ಬಗ್ಗೆ ಮಾತನಾಡಿದ್ದರು.

ರಿಯಾ ಚಕ್ರವರ್ತಿ ಹಲವು ಚಾಟ್ ಗಳನ್ನು ಡಿಲೀಟ್ ಮಾಡಿದ್ದರು. ಇವುಗಳನ್ನು ಪುನಃ ಪಡೆಯಲಾಗಿದೆ. ಮೊದಲ ಚಾಟ್ ನಲ್ಲಿ ರಿಯಾ ಚಕ್ರವರ್ತಿ ಹಾಗೂ ಡ್ರಗ್ ಡೀಲರ್ ಎಂದು ಹೇಳಲಾಗುತ್ತಿರುವ ಗೌರವ್ ಆರ್ಯ ನಡುವೆ ನಡೆದಿದೆ. ನಾವು ಹಾರ್ಡ್ ಡ್ರಗ್ಸ್ ಬಗ್ಗೆ ಮಾತನಾಡುವುದಾದರೆ ನಾನು ಹೆಚ್ಚಿನ ಡ್ರಗ್ಸ್ ನ್ನು ಬಳಕೆ ಮಾಡಿಲ್ಲ ಎಂದು ಗೌರವ್ ಗೆ ರಿಯಾ ಚಕ್ರವರ್ತಿ ಮಾ.08, 2017 ರಲ್ಲಿ ಮೆಸೇಜ್ ಕಳಿಸಿದ್ದಾರೆ. 

SCROLL FOR NEXT