ಪಿಎಂ ನರೇಂದ್ರ ಮೋದಿ 
ದೇಶ

ಭಾರತೀಯ ರಕ್ಷಣಾ ವಲಯದಲ್ಲಿ ಶೇ.74 ರಷ್ಟು ವಿದೇಶಿ ನೇರ ಹೂಡಿಕೆಗೆ ಅವಕಾಶ: ಪ್ರಧಾನಿ ಮೋದಿ

ಭಾರತೀಯ ರಕ್ಷಣಾ ವಲಯದಲ್ಲಿ ಶೇ. ೭೪ ರಷ್ಟು ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನವದೆಹಲಿ: ಭಾರತೀಯ ರಕ್ಷಣಾ ವಲಯದಲ್ಲಿ ಶೇ. ೭೪ ರಷ್ಟು ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಆತ್ಮನಿರ್ಭರ್ ಅಭಿಯಾನದ ಭಾಗವಾಗಿ ಭಾರತ ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಏನು ಮಾಡಬೇಕು ಎಂಬ ವಿಷಯದ ಮೇಲೆ ನಡೆದ ವೆಬಿನಾರ್ ನಲ್ಲಿ ಪ್ರಧಾನಿ ಮೋದಿ ಗುರುವಾರ ಪ್ರಧಾನಿ ಮೋದಿ ಭಾಷಣ ಮಾಡಿದರು. ಈ ವೇಳೆ ರಕ್ಷಣಾ ಉತ್ಪನ್ನಗಳಿಗೆ ಭಾರತ ದಶಕಗಳಿಂದ ಆಮದಿನ ಮೇಲೆ  ಅವಲಂಭಿತವಾಗಿದೆ. ವಾಸ್ತವವಾಗಿ, ದೇಶ ಸ್ವಾತಂತ್ರ್ಯ ಪಡೆಯುವ ಮೊದಲು (ಸುಮಾರು ೧೦೦ ವರ್ಷಗಳ ಹಿಂದೆ) ಭಾರತದಲ್ಲಿ ನಾನಾ ರೀತಿಯ ರಕ್ಷಣಾ ಸಾಧನಗಳು ತಯಾರಾಗುತ್ತಿದ್ದವು. ಆದರೆ ಸ್ವಾತಂತ್ರ್ಯ ನಂತರ ಆರಂಭಿಕ ಹಂತದಲ್ಲಿ ಅಂದಿನ ಸರ್ಕಾರಗಳು ಆ ವಿಷಯದ ಬಗ್ಗೆ ಗಮನ ಹರಿಸಲಿಲ್ಲ. ಇದರಿಂದ  ಕ್ರಮೇಣ ನಾವು ಆಮದಿನ ಮೇಲೆ ಅವಲಂಬಿತವಾಗುವಂತಾಯಿತು ಎಂದು ಹೇಳಿದರು.

ಅಂತೆಯೇ ಪ್ರಸ್ತುತ ಭಾರತ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದು, ಆತ್ಮನಿರ್ಭರ ಭಾರತ್ ಅಭಿಯಾನದ ಮೂಲಕ ಮುಂದಿನ ದಿನಗಳಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುತ್ತೇವೆ. ದೇಶೀಯವಾಗಿ ಸೇನಾ ಸಾಧನಗಳ ತಯಾರಿಕೆ ಹೆಚ್ಚಿಸುವುದು ಸರ್ಕಾರದ ಆದ್ಯತೆಯಾಗಿದ್ದು, ಈ ಕ್ರಮವಾಗಿ ಹೊಸ ತಂತ್ರಜ್ಞಾನ  ಅಭಿವೃದ್ದಿಗಾಗಿ ಖಾಸಗಿಯವರಿಗೂ ಅವಕಾಶ ಕಲ್ಪಿಸಲಾಗುವುದು ಎಂದರು. ಭಾರತೀಯ ರಕ್ಷಣಾ ವಲಯದಲ್ಲಿ ಶೇ. 74 ರಷ್ಟು ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ಅವಕಾಶ ನೀಡಲು ನಿರ್ಧರಿಸಲಾಗಿದ್ದು. ರಕ್ಷಣಾ ವಲಯದಲ್ಲಿ ವಿದೇಶಿ ಹೂಡಿಕೆಗೆ ಆಹ್ವಾನಿಸುತ್ತಲೇ, ಭಾರತ ಸ್ವಂತ ಶಕ್ತಿಯ ಮೇಲೆ ಬೆಳೆಯಲಿದೆ ಎಂದು  ಹೇಳಿದರು.

ಅದೇ ಸಮಯದಲ್ಲಿ, ಭಾರತೀಯ ರಕ್ಷಣಾ ವಲಯ ಉತ್ತೇಜಿಸಲು ಕೆಲ ವಿದೇಶಿ ರಕ್ಷಣಾ ಸಾಧನಗಳ ಆಮದಿನ ಮೇಲೆ ನಿರ್ಬಂಧ ವಿಧಿಸಿಸಿರುವುದನ್ನು ಅವರು ಸ್ಮರಿಸಿದರು.

ಇದೇ ವೇಳೆ 'ಆತ್ಮನಿರ್ಭರ ಭಾರತ ಅಭಿಯಾನ' ಎಂದರೆ ಹೊರಗಿನವರು ಒಳಗೆ ಬರದಂತೆ ನಮಗೆ ನಾವು ಎಲ್ಲ ದ್ವಾರಗಳನ್ನು ಮುಚ್ಚುವುದಲ್ಲ. ಆತ್ಮನಿರ್ಭರತೆಯ ನೈಜ ಉದ್ದೇಶ..ಭಾರತವನ್ನು ಸಶಕ್ತವಾಗಿ ರೂಪಿಸಿ ವಿಶ್ವ ಆರ್ಥಿಕರಂಗವನ್ನು ನಿಭಾಯಿಸುವಂತಹ ಸ್ಥಾನದಲ್ಲಿ ನಿಲ್ಲಿಸುವುದಾಗಿದೆ ಎಂದು ಹೇಳಿದರು. ಈ  ಮಹತ್ವದ ವೆಬ್‌ನಾರ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸೇನೆಯ ಮೂರು ಪಡೆಗಳ ಮುಖ್ಯಸ್ಥರು ಮತ್ತು ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT