ಸುಪ್ರೀಂ ಕೋರ್ಟ್ 
ದೇಶ

ದೇಶಾದ್ಯಂತ ಮೊಹರಂ ಮೆರವಣಿಗೆಗೆ ಅನುಮತಿ ನೀಡಲು ಸುಪ್ರೀಂ ನಕಾರ

ದೇಶಾದ್ಯಂತ ಮೊಹರಂ ಮೆರವಣಿಗೆಗೆ ಅನುಮತಿ ನೀಡುವುದಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕೊರೋನಾ ಕಾರಣದಿಂದಾಗಿ ಸುಪ್ರೀಂ ಕೋರ್ಟ್ ಮೆರವಣಿಗೆಗೆ ಅನುಮತಿ ನೀಡುವುದಕ್ಕೆ ನಿರಾಕರಿಸಿದೆ. 

ನವದೆಹಲಿ: ದೇಶಾದ್ಯಂತ ಮೊಹರಂ ಮೆರವಣಿಗೆಗೆ ಅನುಮತಿ ನೀಡುವುದಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕೊರೋನಾ ಕಾರಣದಿಂದಾಗಿ ಸುಪ್ರೀಂ ಕೋರ್ಟ್ ಮೆರವಣಿಗೆಗೆ ಅನುಮತಿ ನೀಡುವುದಕ್ಕೆ ನಿರಾಕರಿಸಿದೆ. 

ಅರ್ಜಿ ಸಲ್ಲಿಸಿದ್ದ ಲಖನೌ ಮೂಲದ ಅರ್ಜಿದಾರನಿಗೆ ಅಲ್ಲಹಾಬಾದ್ ಹೈಕೋರ್ಟ್ ಗೆ ಹೋಗುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ. 

ಇಡೀ ದೇಶಕ್ಕೆ ಸಾಮಾನ್ಯವಾದ ಆದೇಶವನ್ನು ನೀಡುವುದಕ್ಕೆ ಹೇಗೆ ಸಾಧ್ಯ ಎಂದು ಸುಪ್ರೀಂ ಕೋರ್ಟ್ ಕೇಳಿದೆ. 

ನ್ಯಾ.ಎಸ್ಎ ಬೋಬ್ಡೆ ಹಾಗೂ ನ್ಯಾ.ಎಎಸ್ ಬೋಪಣ್ಣ, ನ್ಯಾ. ವಿ ಸುಬ್ರಹ್ಮಣಿಯನ್ ಅವರಿದ್ದ ಪೀಠ ಅವ್ಯವಸ್ಥೆ ಉಂಟಾಗಿ, ನಿರ್ದಿಷ್ಟವಾದ ಮತವನ್ನು ಟಾರ್ಗೆಟ್ ಮಾಡುವಂತೆ ಆಗಲಿದೆ ಎಂದು ಹೇಳಿದೆ.

ನೀವು ದೇಶಕ್ಕೆಲ್ಲಾ ಒಂದೇ ಆದೇಶವನ್ನು ನೀಡುವುದಕ್ಕೆ ಕೇಳುತ್ತಿದ್ದೀರಿ ಹಾಗಾದರೆ ಅದರಿಂದ ಅವ್ಯವಸ್ಥೆ ಉಂಟಾಗಲಿದೆ, ಕೋವಿಡ್-19 ಹರಡುವಿಕೆಗೆ ನಿರ್ದಿಷ್ಟ ಸಮುದಾಯದವರು ದೂಷಿಸಲ್ಪಡುತ್ತಾರೆ. ಅದು ಆಗಬಾರದು, ನ್ಯಾಯಾಲಯವಾಗಿದ್ದುಕೊಂಡು ಜನರ ಆರೋಗ್ಯದಲ್ಲಿ ಅಪಾಯವನ್ನು ಆಹ್ವಾನಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ . 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT