ದೇಶ

ಅಮಾನುಷ ಘಟನೆ: ನಾಯಿ ಮರಿಯನ್ನು ಕಾಲಿನಿಂದ ತುಳಿದು ಕೊಂದ ಮಹಿಳೆ, ಮನಕಲಕುವ ವಿಡಿಯೋ!

Vishwanath S

ಲಖನೌ: ಒಂದು ತುತ್ತು ಅನ್ನ ಹಾಕಿದರೆ ಸಾಕು ನಾಯಿಗಳು ಅವರನ್ನು ಮರೆಯುವುದಿಲ್ಲ. ಅಂತಹದರಲ್ಲಿ ಐಷಾರಾಮಿ ಕಾರಿನಲ್ಲಿ ಮಹಿಳೆಯೊಬ್ಬರು ನಾಯಿ ಮರಿಯ ಕುತ್ತಿಗೆಯನ್ನು ಕಾಲಿನಿಂದ ತುಳಿದು ಸಾಯಿಸಿರುವ ಅಮಾನವೀಯ ಘಟನೆ ನಡೆದಿದೆ.

ಈ ಕ್ರೂರತೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಾಣಿ ಪ್ರಿಯರು ಮತ್ತು ಪ್ರಾಣಿ ಹಕ್ಕುಗಳ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತು. ಈ ಅಮಾನವೀಯ ಘಟನೆ ಸಂಬಂಧ ಮಹಿಳೆ ವಿರುದ್ಧ ಪ್ರಾಣಿಗಳ ಕ್ರೌರ್ಯ ಕಾಯ್ದೆಯಡಿ ದಾಖಲಿಸಲಾಗಿದೆ.

ಪ್ರಾಣಿ ಹಕ್ಕುಗಳ ಕಾರ್ಯಕರ್ತ ಕಮ್ನಾ ಪಾಂಡೆ ಅವರು ಎಫ್‌ಐಆರ್ ದಾಖಲಿಸಿದ್ದು ಪೂಜಾ ಧಿಲ್ಲೋನ್ ಮತ್ತು ಅವರ ಪತಿ ರಾಜ್ ಧಿಲ್ಲೋನ್ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಪೆಟಾದ ಲಖನೌ(ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್) ಕೂಡ ಈ ಘಟನೆಯ ಬಗ್ಗೆ ಧ್ವನಿ ಎತ್ತಿದೆ.

ವೈರಲ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿರುವ ದಂಪತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ಸ್ವತಂತ್ರ ತಂತ್ರ ಸಿಂಗ್ ಖಚಿತಪಡಿಸಿದ್ದಾರೆ. “ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಕಮ್ನಾ ಪಾಂಡೆ ಅವರಿಂದ ಲಿಖಿತ ದೂರು ಬಂದಿದೆ. ಅದರ ಆಧಾರದ ಮೇಲೆ ನಾವು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. 

ಐಪಿಸಿಯ ಸೆಕ್ಷನ್ 429 (ಪ್ರಾಣಿಗಳನ್ನು ಕೊಲ್ಲುವ ಅಥವಾ ದುರುಪಯೋಗಪಡಿಸಿಕೊಳ್ಳುವ ಮೂಲಕ) ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟುವ ಕಾಯ್ದೆಯ ಸೆಕ್ಷನ್ 3/11 ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸಿಪಿ ತಿಳಿಸಿದ್ದಾರೆ.

SCROLL FOR NEXT