ದೇಶ

ನೀಟ್ -ಜೆಇಇ ಪರೀಕ್ಷೆ ಬಿಗಿಪಟ್ಟು: ವಿದ್ಯಾರ್ಥಿಗಳು- ದ್ರೌಪದಿ, ಸಿಎಂಗಳು- ಕೃಷ್ಣ, ನಾನು ವಿದುರ-ಸುಬ್ರಮಣಿಯನ್ ಸ್ವಾಮಿ

Shilpa D

ನವದೆಹಲಿ: ನೀಟ್ ಹಾಗೂ ಜೆಇಇ ಪರೀಕ್ಷೆಯನ್ನು ಮುಂದೂಡಿಕೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸರ್ಕಾರ ಬಿಗಿಪಟ್ಟು ಹಾಕಿ ಕುಳಿತಿದೆ . ಈ ಗೊಂದಲವನ್ನು ಬಿಜೆಪಿ ಮುಖಂಡ ಡಾ. ಸುಬ್ರಮಣ್ಯಂ ಸ್ವಾಮಿ ಅವರು ದ್ರೌಪದಿ- ಕೃಷ್ಣ ಪಾತ್ರಗಳಿಗೂ ಜೊತೆಗೆ ತಮ್ಮನ್ನು ಮಹಾಭಾರತದ ವಿದುರನ ಪಾತ್ರಕ್ಕೆ ಹೋಲಿಕೆ ಮಾಡಿಕೊಂಡಿದ್ದಾರೆ. 

ಆದರೆ ವಿದ್ಯಾರ್ಥಿ ಸಂಘಟನೆಗಳು, ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಪರೀಕ್ಷೆ ನಡೆಸುವುದು ಸೂಕ್ತವಲ್ಲ ಮುಂದೂಡಿಕೆ ಮಾಡಬೇಕು ಎಂದು ಬಿಗಿ ಪಟ್ಟು ಹಿಡಿದಿದ್ದಾರೆ. ವಿದ್ಯಾರ್ಥಿಗಳ ಅಭಿಪ್ರಾಯವನ್ನು ಬೆಂಬಲಿಸಿ ವಿಪಕ್ಷಗಳು ಕೂಡ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿವೆ. ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿ ಇಂದು ಕಾಂಗ್ರೆಸ್ ಪ್ರತಿಭಟನೆಗೂ ಮುಂದಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ನೀಟ್ ಹಾಗೂ ಜೆಇಇ ಪರೀಕ್ಷೆಯ ವಿಚಾರದಲ್ಲಿ ವಿದ್ಯಾರ್ಥಿಗಳನ್ನು ದ್ರೌಪದಿಯಂತೆ ವಸ್ತ್ರಾಪಹರಣ ಮಾಡಲಾಗುತ್ತಿದೆೇ? ಮುಖ್ಯಮಂತ್ರಿಗಳು ದ್ರೌಪದಿಗೆ ವಸ್ತ್ರವನ್ನಿತ್ತ ಕೃಷ್ಣನ ಪಾತ್ರವನ್ನು ನಿರ್ವಹಿಸಲಿ. ವಿದ್ಯಾರ್ಥಿಯಾಗಿ ಮತ್ತು ನಂತರ ಪ್ರಾಧ್ಯಾಪಕನಾಗಿ ನನ್ನ 60 ವರ್ಷಗಳ ಅನುಭವವು ಮುಂದೆ ಏನೋ
ತಪ್ಪು ನಡೆಯಲಿದೆ ಎನ್ನುವುದನ್ನು ಸೂಚಿಸುತ್ತಿದೆ. ನನಗೀಗ ವಿದುರನಂತೆ ಅನುಭವವಾಗುತ್ತಿದೆ ಎಂದು ಹೇಳಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ಅವರು, ಆಯಾ ರಾಜ್ಯಗಳಲ್ಲಿನ ಪರೀಕ್ಷಾ ಕೇಂದ್ರಗಳಿಗೆ ಮತ್ತು ಪರೀಕ್ಷಾ ಕೇಂದ್ರಗಳಿಂದ ಮನೆಗಳಿಗೆ ಸುರಕ್ಷಿತವಾಗಿ ತೆರಳಬಹುದು ಎಂಬ ಗ್ಯಾರೆಂಟಿಯನ್ನು ಆಯಾ ರಾಜ್ಯಗಳ ಸಿಎಂಗಳು ನೀಡುತ್ತಾರೆಯೇ? ಸಾಧ್ಯವಾಗುವುದಿಲ್ಲವಾದರೆ, ಅದನ್ನು ನೀವು ಸಾರ್ವಜನಿಕವಾಗಿ ಹೇಳಬೇಕು. ಮತ್ತು ನಾವು ಪರೀಕ್ಷೆ ನಡೆಸುವುದಿಲ್ಲ ಎಂದು
ಪ್ರಧಾನಿಗೆ ಸ್ಪಷ್ಟವಾಗಿ ತಿಳಿಸಬೇಕು. ಆಗ ಅವರು ಅದನ್ನು ಸಮನ್ವಯಗೊಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT