ದೇಶ

ಕೋವಿಡ್-19: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 77,266 ಹೊಸ ಕೇಸು, 33.87 ಲಕ್ಷ ತಲುಪಿದ ಸೋಂಕಿತರ ಸಂಖ್ಯೆ

Sumana Upadhyaya

ನವದೆಹಲಿ: ದೇಶದಲ್ಲಿ ಕೊರೋನಾ ರೌದ್ರನರ್ತನ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 77 ಸಾವಿರದ 266 ಮಂದಿಯಲ್ಲಿ ವೈರಸ್ ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 33 ಲಕ್ಷ ಗಡಿ ದಾಟಿದೆ.

ನಿನ್ನೆ ಒಂದೇ ದಿನ 77,266 ಹೊಸ ಕೇಸ್ ಜೊತೆಗೆ ಪ್ರಸ್ತುತ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 33,87,501ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ ಸೋಂಕಿಗೆ ಸಾವಿರದ 057 ಮಂದಿ ಮಹಾಮಾರಿ ವೈರಸ್ ಗೆ ಬಲಿಯಾಗಿದ್ದು, ಇದುವರೆಗೆ ದೇಶದಲ್ಲಿ ಕೊರೋನಾಗೆ ಮೃತಪಟ್ಟವರ ಸಂಖ್ಯೆ 61,529ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಈ ನಡುವೆ 33,87,501 ಮಂದಿ ಸೋಂಕಿತರ ಪೈಕಿ 25,83,948 ಮಂದಿ ಗುಣಮುಖರಾಗಿದ್ದು, ದೇಶದಲ್ಲಿ ಇನ್ನೂ 7,42,023 ಸಕ್ರಿಯ ಕೇಸುಗಳಿವೆ ಎಂದು ಸಚಿವಾಲಯದ ಮಾಹಿತಿ ತಿಳಿಸಿದೆ.

ತೆಲಂಗಾಣದಲ್ಲಿ ಕಳೆದ 24 ಗಂಟೆಗಳಲ್ಲಿ 2 ಸಾವಿರದ 932 ಕೇಸುಗಳು, 11 ಸಾವು ಕೊರೋನಾದಿಂದ ಸಂಭವಿಸಿದೆ. ಮಿಜೋರಂನಲ್ಲಿ 29 ಹೊಸ ಕೇಸುಗಳೊಂದಿಗೆ ಸೋಂಕಿತರ ಸಂಖ್ಯೆ 1003 ಆಗಿದೆ.

ನಿನ್ನೆ ಸೋಂಕಿಗೊಳಗಾದವರ ಪ್ರಮುಖ ವ್ಯಕ್ತಿಗಳ ಪೈಕಿ ಪಂಜಾಬ್ ಸಂಸದೀಯ ವ್ಯವಹಾರಗಳ ಸಚಿವ ಬ್ರಹ್ಮ್ ಮೊಹಿಂದ್ರಾ ಸೋಂಕಿತ 29 ಶಾಸಕರ ಪೈಕಿ ಒಬ್ಬರು. ಇಂದು ಪಂಜಾಬ್ ವಿಧಾನಸಭೆಯ ಮುಂಗಾರು ಅಧಿವೇಶನ ಆರಂಭಗೊಂಡಿದೆ. ನಿನ್ನೆ ಒಂದೇ ದಿನದಲ್ಲಿ 1,746 ಕೋವಿಡ್ ಕೇಸುಗಳಾಗಿದ್ದು ಒಟ್ಟು ಸೋಂಕಿತರು 47 ಸಾವಿರದ 836 ಆಗಿದೆ.

SCROLL FOR NEXT