ದೇಶ

ಶಾಲೆಗಳು ಪುನಾರಂಭವಾಗುವವರೆಗೆ ವಾರ್ಷಿಕ ಮತ್ತು ಅಭಿವೃದ್ಧಿ ಶುಲ್ಕ ವಿಧಿಸುವಂತಿಲ್ಲ: ದೆಹಲಿ ಹೈಕೋರ್ಟ್

Lingaraj Badiger

ನವದೆಹಲಿ: ಶಾಲೆಗಳು ಮತ್ತೆ ಆರಂಭವಾಗುವವರೆಗೆ ವಾರ್ಷಿಕ ಮತ್ತು ಅಭಿವೃದ್ಧಿ ಶುಲ್ಕ ವಿಧಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಶಾಲಾ ಆಡಳಿತ ಮಂಡಳಿಗಳಿಗೆ ಶನಿವಾರ ಎಚ್ಚರಿಕೆ ನೀಡಿದೆ.

ಜುಲೈನಿಂದ ಬೋಧನಾ ಶುಲ್ಕದೊಂದಿಗೆ ವಾರ್ಷಿಕ ಮತ್ತು ಅಭಿವೃದ್ಧಿ ಶುಲ್ಕಗಳನ್ನು ಪಡೆಯುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಖಾಸಗಿ ಶಾಲೆಯೊಂದರ ಪೋಷಕರ ಸಂಘ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ನಾಥ್ ಅವರು "ಪ್ರಸ್ತುತ ಲಾಕ್‌ಡೌನ್‌ನ ಬಾಕಿ ಇರುವ ಸಮಯದಲ್ಲಿ" ವಿದ್ಯಾರ್ಥಿಗಳ ಪೋಷಕರಿಂದ ವಾರ್ಷಿಕ ಮತ್ತು ಅಭಿವೃದ್ಧಿ ಶುಲ್ಕಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ಆದೇಶ ನೀಡಿದ್ದಾರೆ.

ಮುಂದಿನ ಆದೇಶದವರೆಗೆ ಪೋಷಕರಿಂದ ವಾರ್ಷಿಕ ಮತ್ತು ಅಭಿವೃದ್ಧಿ ಶುಲ್ಕವನ್ನು ತೆಗೆದುಕೊಳ್ಳದಂತೆ ನ್ಯಾಯಾಲಯ ನಿರ್ಬಂಧಿಸಿದೆ.

ಈ ಸಂಬಂಧ ಹೈಕೋರ್ಟ್ ದೆಹಲಿ ಸರ್ಕಾರ ಮತ್ತು ಖಾಸಗಿ ಶಾಲೆಗೆ ನೋಟಿಸ್ ಜಾರಿಗೊಳಿಸಿದೆ.

SCROLL FOR NEXT