ದೇಶ

ಕಾಸರಗೋಡು: ಮಂಜೇಶ್ವರ ಶಾಸಕ ಖಮರುದ್ದೀನ್ ವಿರುದ್ಧ ವಂಚನೆ ಪ್ರಕರಣ  ದಾಖಲು

Raghavendra Adiga

ಕಾಸರಗೋಡು: ಮಂಜೇಶ್ವರ ಶಾಸಕ ಮತ್ತು ಫ್ಯಾಶನ್ ಗೋಲ್ಡ್ ಮಾಲೀಕ ಎಂ.ಸಿ. ಖಮರುದ್ದೀನ್ ಹೂಡಿಕೆದಾರರಿಗೆ ಹಣ ಹಿಂತಿರುಗಿಸದ ಕಾರಣ ಅವರ ವಿರುದ್ಧ ಆರೋಪ ಕೇಳಿಬಂದ ನಂತರ ತೊಂದರೆಗೆ ಸಿಲುಕಿದ್ದಾರೆ. ಚಂದೇರಾ ಪೊಲೀಸರು ಐಪಿಸಿ ಸೆಕ್ಷನ್ 420 ರ ಅಡಿಯಲ್ಲಿ ಶಾಸಕ  ಖಮರುದ್ದೀನ್  ಮತ್ತು ಧಾರ್ಮಿಕ ಮುಖಂಡ ಟಿಕೆ ಪೂಕೋಯಾ ತಂಗಳ್ ವಿರುದ್ಧ ಮೂರು  ವಂಚನೆ ಪ್ರಕರಣ ದಾಖಲು ಮಾಡಿದ್ದಾರೆ. 

ಶಾಸಕರ ವ್ಯವಹಾರ ಪಾಲುದಾರರಾದ. ಚರ್ವತ್ತೂರು ಕಡಂಕೋಡಿನ ಅಬ್ದುಲ್ ಶುಕೂರ್ ಮತ್ತು ಪಯಣ್ಣೂರು ಬಳಿಯ ವೆಲ್ಲೂರ್‌ನ ಆರಿಫ್ ಮತ್ತು ಝಹರಾ ಶಾಸಕರ ವಿರುದ್ಧ  ದೂರು ದಾಖಲು ಮಾಡಿದವರಾಗಿದ್ದಾರೆ.

ಫ್ಯಾಷನ್ ಗೋಲ್ಡ್ ನಲ್ಲಿ ಆರಿಫ್ ಹಾಗೂ ಝಹರಾ ತಲಾ 3 ಲಕ್ಷ ರೂ. ಮತ್ತು ಶುಕೂರ್ 30 ಲಕ್ಷ ರೂ. ಹೂಡಿಕೆ ಮಾಡಿದ್ದರು, ಕಳೆದ ವರ್ಷ ಅಬುಧಾಬಿಯ ಲೋಕೋಪಯೋಗಿ ಇಲಾಖೆಯಿಂದ ನಿವೃತ್ತರಾದ ಶುಕೂರ್  "ನನ್ನ ಹೂಡಿಕೆಗೆ ಅನುಗುಣವಾಗಿ ಲಾಭದ ಪಾಲನ್ನು ಮತ್ತು ನನ್ನ ಹಣವನ್ನು ನಾನು ಕೇಳಿದಾಗಲೆಲ್ಲಾ ಹಿಂದಿರುಗಿಸುತ್ತೇನೆ ಎಂದು ಹೇಳುವ ಒಪ್ಪಂದಕ್ಕೆ ನಾವು ಸಹಿ ಹಾಕಿದ್ದೇವೆ. ಕಳೆದ ವರ್ಷ ತನ್ನ ಹಣವನ್ನು ತೆಗೆದುಕೊಳ್ಳುವ ಮೊದಲು ಶಾಸಕ ಮತ್ತು ತಂಗಳ್ ಅವರೊಂದಿಗೆ ಮಾತುಕತೆ ನಡೆಸಿದರು ಮತ್ತು ಒಪ್ಪಂದದ ಹೊರತಾಗಿ ಅವರು ಮಾತು ಕೊಟ್ಟಿದ್ದರು, 

"ನಾನು ನನ್ನ ಹಣವನ್ನು ಕೇಳಲು ಪ್ರಾರಂಭಿಸಿದಾಗ, ಶಾಸಕರು ನನ್ನನ್ನು ದೂರ ಇಡಲು ಪ್ರಯತ್ನಿಸಿದ್ದರು. " ಶುಕೂರ್ ಹೇಳೀದ್ದಾರೆ.

ಶಾಸಕರ ಮಾಲಿಕತ್ವದ. ಫ್ಯಾಶನ್ ಗೋಲ್ಡ್ ಪಯಣ್ಣೂರು, ತಲಚೇರಿ, ಚರ್ವತ್ತೂರುಮತ್ತು ಕಾಸರಗೋಡಿನಲ್ಲಿ ಮಳಿಗೆಗಳನ್ನು ಹೊಂದಿದೆ. ಎಲ್ಲಾ ಮಳಿಗೆಗಳನ್ನು ಈಗ ಮುಚ್ಚಲಾಗಿದೆ. ಅಪನಗದೀಕರಣದ ನಂತರ ನಷ್ಟ ಪ್ರಾರಂಭವಾಗಿತ್ತೆಂದು ಖಮರುದ್ದೀನ್ ಹೇಳಿದ್ದಾರೆ.

ವ್ಯಕ್ತಿಗಳಲ್ಲದೆ, ಕನಿಷ್ಠ ಒಂಬತ್ತು ಮಹಲ್ ಕಮಿಟಿಗಳು ವಕ್ಫ್ ಮಂಡಳಿಯ ಅನುಮತಿಯಿಲ್ಲದೆ ವ್ಯವಹಾರದಲ್ಲಿ ಹೂಡಿಕೆ ಮಾಡಿವೆ ಎಂದು ಸಿಪಿಎಂ ಆರೋಪಿಸಿದೆ
 

SCROLL FOR NEXT