ದೇಶ

ಒಡಿಶಾ: ತುಂಬು ಗರ್ಭಿಣಿಯ ಆಸ್ಪತ್ರೆಗೆ ಸೇರಿಸಿ ಇತರರಿಗೆ ಮಾದರಿಯಾದ ಅಗ್ನಿಶಾಮಕದಳ ಸಿಬ್ಬಂದಿ

Manjula VN

ನಯಾಗರ್ಹ್: ಒಡಿಶಾದ ಚಾಮುಂಡಿಯಾ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಪ್ರವಾಹ ಸಂಕಷ್ಟಕ್ಕೆ ಸಿಲುಕಿದ್ದ ತುಂಬು ಗರ್ಭಿಣಿಯೊಬ್ಬರಿಗೆ ಸಹಾಯ ಹಸ್ತ ಚಾಚುವ ಮೂಲಕ ಅಗ್ನಿ ಶಾಮಕದ ದಳದ ಸಿಬ್ಬಂದಿಗಳು ಇತರರಿಗೆ ಮಾದರಿಯಾಗಿದ್ದಾರೆ. 

ತುಂಬು ಗರ್ಭಿಣಿಯೊಬ್ಬರು ಪ್ರಸವದ ವೇದನೆಯಿಂದ ಬಳಲುತ್ತಿರುವ ವಿಚಾರವನ್ನು ಚಾಮುಂಡಿಯಾ ಗ್ರಾಮದ ಬಿಡಿಒ ಅಧಿಕಾರಿಯೊಬ್ಬರು ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ವೈದ್ಯಕೀಯ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮಹಿಳೆ ಹೆರಿಗೆ ಮಾಡಿಸಲು ಸಹಾಯ ಮಾಡಿದ್ದಾರೆ. 

ಮಹಿಳೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದು, ಕೂಡಲೇ ಮಹಿಳೆ ಹಾಗೂ ಮಗುವನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಸಹಾಯ ಮಾಡಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

SCROLL FOR NEXT