ದೇಶ

ಪ್ರಸಿದ್ದ ಉದ್ಯಮಿ, 'ಎಂಡಿಎಚ್' ಮಸಾಲೆ ಸಂಸ್ಥೆ  ಸ್ಥಾಪಕ ಧರಂಪಾಲ್ ಗುಲಾಟಿ ವಿಧಿವಶ 

Raghavendra Adiga

ನವದೆಹಲಿ: ದೇಶದ ಪ್ರಸಿದ್ಧ ಮಸಾಲೆ ಬ್ರ್ಯಾಂಡ್ ‘ಎಂಡಿಹೆಚ್’ ಮಾಲೀಕ ಧರಂಪಾಲ್ ಗುಲಾಟಿ (98) ಇಂದು ಮುಂಜಾನೆ ನಿಧನರಾದರು. ಕಳೆದ ಮೂರು ವಾರಗಳಿಂದ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುಲಾಟಿ ಕೊರೋನಾ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿದ್ದರು.

ದೇಶದ ಹೆಸರಾಂತ ಉದ್ಯಮಿಯಾಗಿದ್ದ ಗುಲಾಟಿಯವರಿಗೆ ಕಳೆದ ವರ್ಷ "ಪದ್ಮಭೂಷಣ" ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಮಾರ್ಚ್ 27, 1923ರಂದು ಇಂದಿನ ಪಾಕಿಸ್ತಾನದ ಸಿಯಾಲ್ ಕೋಟ್ ನಲ್ಲಿ ಜನಿಸಿದ್ದ ಗುಲಾಟಿ ಶಾಲಾ ವಿದ್ಯಾಭ್ಯಾಸದಿಂಡ ಹೊರಬಂದು ತಂದೆಯ ಮಸಾಲೆ ವ್ಯವಹಾರದಲ್ಲಿ ಜತೆಯಾದರು. 1947 ಭಾರತ-ಪಾಕಿಸ್ತಾನ ವಿಭಜನೆಯ ನಂತರ, ಅವರು ಭಾರತಕ್ಕೆ ಆಗಮಿಸಿ ಇಲ್ಲಿ  ಅಮೃತಸರದ ನಿರಾಶ್ರಿತರ ಶಿಬಿರದಲ್ಲಿ ತಂಗಿದ್ದರು. ಅದರ ನಂತರ ಅವರು ದೆಹಲಿಯ ಕರೋಲ್ ಬಾಗ್‌ಗೆ ತೆರಳಿ ಅಲ್ಲಿ ಒಂದು ಅಂಗಡಿಯನ್ನು ತೆರೆದರು.

ಗುಲಾಟಿಯವರು 1959ರಲ್ಲಿ ಎಂಡಿಎಚ್ ಮಸಾಲೆ ಬ್ರಾಂಡ್ ಪ್ರಾರಂಭಿಸಿದರು. ಇದು ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿ ಸಹ ಹೆಸರಾಯಿತು.ಅವರ ಕಂಪನಿ ಯುಕೆ, ಯುರೋಪ್, ಯುಎಇ, ಕೆನಡಾ ಸೇರಿದಾಂತೆ ವಿಶ್ವದ ವಿವಿಧ ಭಾಗಗಳಿಗೆ ಭಾರತೀಯ ಮಸಾಲೆಗಳನ್ನು ರಫ್ತು ಮಾಡುತ್ತಿದೆ

ಗುಲಾಟಿ ನಿಧನಕ್ಕೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. 

SCROLL FOR NEXT