ದೇಶ

ತಮಿಳುನಾಡು ಜನತೆಗಾಗಿ ಪ್ರಾಣ ಕೊಡಲೂ ಸಿದ್ಧ: ರಾಜಕೀಯ ಪ್ರವೇಶಿಸಿದ ರಜನಿ

Lingaraj Badiger

ಚೆನ್ನೈ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು ಗುರುವಾರ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಘೋಷಿಸುವ ಮೂಲಕ ದಶಕಗಳ ಉಹಾಪೋಹಕ್ಕೆ ತೆರೆ ಎಳೆದಿದ್ದಾರೆ.

"ತಮಿಳುನಾಡಿನಲ್ಲಿ ಬದಲಾವಣೆ ತರಲು ನಾನು ರಾಜಕೀಯವನ್ನು ಪ್ರವೇಶಿಸಲು ನಿರ್ಧರಿಸಿದ್ದೇನೆ. ನಾನು ಈ ಕಾರ್ಯಾಚರಣೆಯಲ್ಲಿ ಕೇವಲ ಒಂದು ಸಣ್ಣ ಸಾಧನ ಅಷ್ಟೆ. ನಾನು ಯಶಸ್ವಿಯಾದರೆ ಅದು ಜನರ ಯಶಸ್ಸು. ನಾನು ಸೋತರೆ(ನನ್ನ ಪ್ರಯತ್ನದಲ್ಲಿ), ಅದು ನಿಮ್ಮ ಸೋಲು. ರಾಜ್ಯದಲ್ಲಿ ಬದಲಾವಣೆ ತರಲು ನೀವು ನನ್ನೊಂದಿಗೆ ನಿಲ್ಲಬೇಕು ಎಂದು ನಾನು ನಿಮ್ಮೆಲ್ಲರಿಗೂ ಮನವಿ ಮಾಡುತ್ತೇನೆ. ನಾವು ಎಲ್ಲವನ್ನೂ ಪರಿವರ್ತಿಸೋಣ. ಈಗ ಇಲ್ಲದಿದ್ದರೆ ಅದು ಎಂದಿಗೂ ಆಗುವುದಿಲ್ಲ” ಎಂದು ರಜನಿಕಾಂತ್ ಹೇಳಿದ್ದಾರೆ.

ಇಂದು ಪೋಯಸ್ ಗಾರ್ಡನ್ ನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಜನಿ, “ಪ್ರತಿಯೊಬ್ಬ ವ್ಯಕ್ತಿಗೂ ಒಂದು ಹಣೆಬರಹ ಇರುತ್ತದೆ. ಅಂತೆಯೇ, ದೇಶಕ್ಕೂ ಒಂದು ಹಣೆಬರಹವಿದೆ. ಆದ್ದರಿಂದ, ಈಗ ಇದು ತಮಿಳುನಾಡಿನ ಹಣೆಬರಹವನ್ನು ಬದಲಾಯಿಸುವ ಸಮಯ. ಖಂಡಿತವಾಗಿ, ತಮಿಳುನಾಡಿನ ಕಾವಲುಗಾರರ ಮತ್ತು ಅದರ ರಾಜಕೀಯದಲ್ಲಿ ಬದಲಾವಣೆಯಾಗುತ್ತದೆ" ಎಂದಿದ್ದಾರೆ.

'ಜನರ ಬೆಂಬಲದಿಂದ ಮುಂಬರುವ ಚುನಾವಣೆಯಲ್ಲಿ ನಾವು ದೊಡ್ಡ ಗೆಲುವು ಸಾಧಿಸುತ್ತೇವೆ. ತಮಿಳುನಾಡಿನಲ್ಲಿ ಪಾರದರ್ಶಕ ಮತ್ತು ಪ್ರಾಮಾಣಿಕವಾದ ಒಂದು ಹೊಸಬಗೆಯ ರಾಜಕೀಯ ಮುನ್ನೆಲೆಗೆ ಬರಲಿದೆ. ಭ್ರಷ್ಟಾಚಾರವಿಲ್ಲದ, ಜಾತಿ-ಧರ್ಮಗಳ ಭೇದ ಇಲ್ಲ ರಾಜಕೀಯ ಇದಾಗಿರಲಿದೆ. ಅದ್ಭುತಗಳು ನಡೆಯಬಹುದು' ಎಂದು ರಜನಿಕಾಂತ್‌ ಭರವಸೆ ನೀಡಿದ್ದಾರೆ.

ರಜನಿಕಾಂತ್‌ ಅವರಿಗೆ ಈಗ 69 ವರ್ಷ ವಯಸ್ಸು. ಕೊರೋನಾ ವೈರಸ್‌ ಹಬ್ಬುತ್ತಿರುವ ಇಂಥ ಪರಿಸ್ಥಿತಿಯಲ್ಲಿ ಅವರು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದು ಸೂಕ್ತವಲ್ಲ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಆ ಕಾರಣದಿಂದ ಅವರ ರಾಜಕೀಯ ಪ್ರವೇಶ ಇನ್ನಷ್ಟು ತಡವಾಗಬಹುದು ಎಂಬ ಅನುಮಾನ ಮನೆ ಮಾಡಿತ್ತು. ಆದರೆ ಆ ಅನುಮಾನಕ್ಕೆ ರಜನಿಕಾಂತ್‌ ತೆರೆ ಎಳೆದಿದ್ದಾರೆ. ಡಿ.31ರಂದು ಅವರು ಹೊಸ ರಾಜಕೀಯ ಪಕ್ಷ ಘೋಷಿಸುವುದಾಗಿ ಹೇಳಿದ್ದಾರೆ.

SCROLL FOR NEXT