ದೇಶ

ನೌಕಾಪಡೆ ದಿನ: ರಾಷ್ಟ್ರಪತಿ, ಪ್ರಧಾನಿ, ರಕ್ಷಣಾ ಸಚಿವರಿಂದ ಶುಭಾಶಯ

Sumana Upadhyaya

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವರು ನೌಕಾಪಡೆ ದಿನದ ಶುಭಾಶಯ ತಿಳಿಸಿದ್ದಾರೆ.

ರಾಷ್ಟ್ರಪತಿ ಕೋವಿಂದ್, ನೌಕಾಪಡೆ ಸಿಬ್ಬಂದಿಗೆ, ನಿವೃತ್ತ ಹಿರಿಯ ಸಿಬ್ಬಂದಿಗೆ ಮತ್ತು ಅವರ ಕುಟುಂಬಸ್ಥರಿಗೆ ಶುಭಾಶಯಗಳು.ನಮ್ಮ ಕಡಲ ಗಡಿನಾಡುಗಳನ್ನು ರಕ್ಷಿಸುವಲ್ಲಿ, ನಮ್ಮ ವ್ಯಾಪಾರ ಮಾರ್ಗಗಳನ್ನು ಭದ್ರಪಡಿಸುವಲ್ಲಿ ಮತ್ತು ನಾಗರಿಕ ತುರ್ತು ಸಂದರ್ಭಗಳಲ್ಲಿ ಸಹಾಯವನ್ನು ನೀಡುವಲ್ಲಿ ನಿಮ್ಮ ಬದ್ಧತೆಯ ಬಗ್ಗೆ ರಾಷ್ಟ್ರ ಹೆಮ್ಮೆಪಡುತ್ತದೆ. ನೀವು ಎಂದಾದರೂ ನೀರನ್ನು ಆಳಲಿ ಎಂದಿದ್ದಾರೆ.

ಭಾರತೀಯ ನೌಕಾಪಡೆ ನಿರ್ಭೀತಿಯಿಂದ ನಮ್ಮ ತೀರಗಳನ್ನು ರಕ್ಷಿಸುತ್ತಿದ್ದು, ಅಗತ್ಯವಿರುವ ಸಮಯಗಳಲ್ಲೆಲ್ಲಾ ಮಾನವೀಯ ನೆಲೆಯಲ್ಲಿ ಸಹಾಯಗಳನ್ನು ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತೀಯ ನೌಕಾಪಡೆ ದಿನದ ಸಂದರ್ಭದಲ್ಲಿ ನೌಕಾಪಡೆ ಸಿಬ್ಬಂದಿಯ ಧೈರ್ಯ, ಸಾಹಸ, ವೃತ್ತಿಪರತೆಗಳನ್ನು ಗೌರವಿಸುತ್ತೇನೆ ಎಂದಿದ್ದಾರೆ.

ಪ್ರತಿವರ್ಷ ಡಿಸೆಂಬರ್ 4ನ್ನು ನೌಕಾಪಡೆ ದಿನವನ್ನಾಗಿ ಆಚರಿಸಲಾಗುತ್ತಿದೆ. 1971ರ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಕರಾಚಿ ಬಂದರು ಮೇಲಿನ ದಾಳಿಯಲ್ಲಿ ಭಾರತ ವಿಜೇತವಾದ ನಂತರ ಡಿಸೆಂಬರ್ 4ನ್ನು ಭಾರತೀಯ ನೌಕಾಪಡೆ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಭಾರತೀಯ ನೌಕಾಪಡೆ ತನ್ನ ವಿಡಿಯೊ ಪೊಸ್ಟ್ ನಲ್ಲಿ, ಬಂದರು ಭದ್ರತೆ ಮತ್ತು ಪ್ರಾಂತೀಯ ಸಮಗ್ರತೆಗೆ ನಿರಂತರ ಬದ್ಧತೆಯನ್ನು ಮುಂದುವರಿಸುತ್ತೇವೆ ಎಂದು ಇಲಾಖೆ ತಿಳಿಸಿದೆ.

SCROLL FOR NEXT