ದೇಶ

ಮಹಾರಾಷ್ಟ್ರ: ಕೇವಲ ಒಂದು ವಾರದಲ್ಲಿ ಒಂದೇ ಗ್ರಾಮದ 66 ಮಂದಿಗೆ ಕೊರೋನಾ ಸೋಂಕು

Srinivasamurthy VN

ಮಹಾರಾಷ್ಟ್ರ​: ಮಾರಕ ಕೊರೋನಾ ವೈರಸ್ ಅಬ್ಬರ ಮಹಾರಾಷ್ಟ್ರದಲ್ಲಿ ಮುಂದುವರೆದಿದ್ದು, ಕೇವಲ ಒಂದು ವಾರದ ಅವಧಿಯಲ್ಲಿ ಒಂದೇ ಗ್ರಾಮದ 66 ಮಂದಿಗೆ ಸೋಂಕು ಒಕ್ಕರಿಸಿದೆ.

ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಟೆಹ್ಸಿಲ್ ನ ಖಾನೇಪುರಿ ಗ್ರಾಮದಲ್ಲಿ 66 ಮಂದಿ ನಿವಾಸಿಗಳಿಗೆ ಸೋಂಕು ಒಕ್ಕರಿಸಿದೆ. ಒಟ್ಟು 1700 ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಇದೀಗ ಕೊರೋನಾ ಸೋಂಕಿನ ಭೀತಿ ಆವರಿಸಿದೆ. ನವೆಂಬರ್ 26ರಿಂದ ಡಿಸೆಂಬರ್ 3ರ ಅವಧಿಯಲ್ಲಿ ಈ ಗ್ರಾಮದಲ್ಲಿ ಒಟ್ಟು 66 ಮಂದಿ ಗ್ರಾಮಸ್ಥರು ಸೋಂಕಿಗೆ ತುತ್ತಾಗಿದ್ದಾರೆ ಎಂದು ಇಲ್ಲಿನ ಪ್ರಾಥಮಿಕ ವೈದ್ಯಾಧಿಕಾರಿ ರೆಹಮಾನ್ ಶಕೀಲ್ ಹೇಳಿದ್ದಾರೆ.

ಈ ಪೈಕಿ ಡಿಸೆಂಬರ್ 1ರ  ಒಂದೇ ದಿನ 35 ಪಾಸಿಟಿವ್ ಪ್ರಕರಣಗಳು ವರದಿಯಾಗಿತ್ತು. ಇದಕ್ಕೂ ಮೊದಲು ಅಂದರೆ ನವೆಂಬರ್ 25ರಂದು ಗ್ರಾಮದಲ್ಲಿ ನಡೆದಿದ್ದ ವ್ಯಕ್ತಿಯೊಬ್ಬ  ಶವ ಸಂಸ್ಕಾರದ ವೇಳೆ ಗ್ರಾಮದ 200 ಗ್ರಾಮಸ್ಥರು ಪಾಲ್ಗೊಂಡಿದ್ದರು. ಈ ವೇಳೆ ಯಾವುದೇ ರೀತಿಯ ಕೋವಿಡ್ ನಿಯಮಾವಳಿಯನ್ನು ಪಾಲಿಸಿರಲಿಲ್ಲ. ಈ ಸಂರ್ಭದಲ್ಲಿ ಸೋಂಕು ಹರಡಿರಬಹುದು ಎಂದು ಶಂಕಿಸಿದ್ದಾರೆ. ಇದಾದ ಬಳಿಕವೇ ಗ್ರಾಮದಲ್ಲಿ ಕ್ರಮೇಣ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಾ ಸಾಗಿದೆ.

ಪ್ರಸ್ತುತ ನಾವು ಎಲ್ಲ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಜಿಲ್ಲೆಯಲ್ಲಿ ಪ್ರಸ್ತುತ 12100 ಸೋಂಕು ಪ್ರಕರಣಗಳಿದ್ದು, 323 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
 

SCROLL FOR NEXT