ದೇಶ

ಹರಿಯಾಣ ವೈದ್ಯ ಸಹೋದರರಿಂದ ರೈತರಿಗಾಗಿ ಸಿಂಘು ಗಡಿಯಲ್ಲಿ ಉಚಿತ ವೈದ್ಯಕೀಯ ಶಿಬಿರ

Lingaraj Badiger

ಸೋನಿಪತ್: ಹರಿಯಾಣದ ಸಿರ್ಸಾ ಜಿಲ್ಲೆಯ ಕೃಷಿ ಕುಟುಂಬಕ್ಕೆ ಸೇರಿದ ಇಬ್ಬರು ವೈದ್ಯ ಸಹೋದರರು ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ.

ವೈದ್ಯರಾದ ಸುಖ್ವಿಂದರ್ ಸಿಂಗ್ ಬ್ರಾರ್ ಮತ್ತು ರಾಮಂಜಿತ್ ಸಿಂಗ್ ಬ್ರಾರ್ ಅವರು ತಮ್ಮ ವೈದ್ಯ ಸ್ನೇಹಿತರ ಸಹಾಯದಿಂದ ಸಿಂಘು ಗಡಿಯಲ್ಲಿ ರೈತರಿಗಾಗಿ ಉಚಿತ ವೈದ್ಯಕೀಯ ಶಿಬಿರ ಆಯೋಜಿಸಿದ್ದಾರೆ.

ಈ ಇಬ್ಬರೂ ವೈದ್ಯ ಸಹೋದರರು ಚಂಡೀಗಢದಲ್ಲಿ ಖಾಸಗಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

"ನಾವು ಪ್ರತಿದಿನ ವಿವಿಧ ಸಮಸ್ಯೆಗಳೊಂದಿಗೆ ಬರುವ ಸುಮಾರು 1,500 ರೈತರಿಗೆ ವೈದ್ಯಕೀಯ ಸೇವೆ ನೀಡುತ್ತಿದ್ದೇವೆ" ಎಂದು ಸುಖ್ವಿಂದರ್ ಅವರು ದೂರವಾಣಿ ಮೂಲಕ ತಿಳಿಸಿದ್ದಾರೆ.

ನಮ್ಮ ಬಳಿ ಹಲವು ಕಾಯಿಲೆಗಳಿಗೆ ಸಂಬಂಧಿಸಿದ ಔಷಧಿಗಳಿದ್ದು, ಔಷಧಿಗಳನ್ನು ಎರಡು ಕಾರುಗಳಲ್ಲಿ ಸಂಗ್ರಹಿಸಲಾಗಿದೆ. ಹೆಚ್ಚಿನ ಜನರು ಅಧಿಕ ರಕ್ತದೊತ್ತಡ, ವಯಸ್ಸಾದವರಲ್ಲಿ ಕೀಲು ನೋವು, ಅತಿಸಾರ, ಮಲಬದ್ಧತೆ ಇತ್ಯಾದಿ ಸಮಸ್ಯೆಗಳಿಂದ ಬರುತ್ತಿದ್ದಾರೆ ಎಂದು ಸುಖ್ವಿಂದರ್ ಹೇಳಿದ್ದಾರೆ.

SCROLL FOR NEXT