ದೇಶ

19 ವರ್ಷಗಳ ಬಳಿಕ ತಲೆಮರೆಸಿಕೊಂಡಿದ್ದ ನಿಷೇಧಿತ ಸಿಮಿ ಸಂಘಟನೆಯ ಸದಸ್ಯನ ಬಂಧನ

Vishwanath S

ನವದೆಹಲಿ: ನಿಷೇಧಿತ ಸ್ಟುಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ-ಸಿಮಿ ಸಂಘಟನೆಯ ತಲೆಮರೆಸಿಕೊಂಡಿದ್ದ ಸದಸ್ಯನೊಬ್ಬನನ್ನು 19 ವರ್ಷಗಳ ಬಳಿಕ ದೆಹಲಿ ಪೊಲೀಸ್ ವಿಶೇಷ ಸೆಲ್ ಬಂಧಿಸಿದೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.

ದೇಶದ್ರೋಹ ಪ್ರಕರಣದಲ್ಲಿ ಕಳೆದ 19 ವರ್ಷಗಳಿಂದ ಪರಾರಿಯಾಗಿದ್ದ ಅಬ್ದುಲ್ಲಾ ದಾನಿಷ್ ಎಂಬ ಸದಸ್ಯನನ್ನು ಜಾಕಿರ್ ನಗರ ಪ್ರದೇಶದಿಂದ ಶನಿವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿಯ ಸುತ್ತ ಮುತ್ತ ಇರುವ ಬಗ್ಗೆ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿ ಬಂಧಿಸಲಾಗಿದೆ.

2001 ರಲ್ಲಿ ಸಿಮಿ ಮೇಲೆ ನಿಷೇಧ ಹೇರಿದಾಗ ಪೊಲೀಸರು ನಡೆಸಿದ ದಾಳಿಯ ವೇಳೆ ಆತ ಪರಾರಿಯಾಗಿದ್ದ. ಆದೆ ಈ ವೇಳೆ ಇತರ ಅನೇಕ ಸದಸ್ಯರನ್ನು ಬಂಧಿಸಲಾಗಿತ್ತು. ಮಾತ್ರವಲ್ಲ ಪ್ರಚೋದನಕಾರಿ ಸಾಹಿತ್ಯ, ಇತರ ವಸ್ತುಗಳನ್ನು ಸಹ ಜಾಮಿಯಾ ನಗರದ  ಪ್ರಧಾನ ಕಚೇರಿಯಿಂದ ವಶಪಡಿಸಿಕೊಳ್ಳಲಾಗಿತ್ತು.

SCROLL FOR NEXT