ದೇಶ

ಸಿಎಎ ಅಡಿ ಪಶ್ಚಿಮ ಬಂಗಾಳದಲ್ಲಿ ನಿರಾಶ್ರಿತ ಹಿಂದೂಗಳಿಗೆ ಜನವರಿಯಲ್ಲಿ ಪೌರತ್ವ: ಬಿಜೆಪಿ ನಾಯಕ

Srinivas Rao BV

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿರುವ ದೊಡ್ಡ ಪ್ರಮಾಣದ ನಿರಾಶ್ರಿತರ ಜನಸಂಖ್ಯೆಗೆ ಸಿಎಎ ಅಡಿಯಲ್ಲಿ ಭಾರತೀಯ ಪೌರತ್ವ ನೀಡುವ ಪ್ರಕ್ರಿಯೆ ಜನವರಿಯಲ್ಲಿ ಪ್ರಾರಂಭವಾಗಲಿದೆ ಎಂದು ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಹೇಳಿದ್ದಾರೆ. 

ಸಿಎಎ ತಿದ್ದುಪಡಿ ಕಾಯ್ದೆ ಪಶ್ಚಿಮ ಬಂಗಾಳದಲ್ಲಿ ಜನವರಿಯಿಂದ ಜಾರಿಗೊಳ್ಳಲಿದೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನಿರಾಶ್ರಿತರೆಡೆಗೆ ಸಹಾನುಭೂತಿ ಹೊಂದಿಲ್ಲ ಎಂದು ಉತ್ತರ ಪರಗಣಾಸ್ ಜಿಲ್ಲೆಯಲ್ಲಿ ಪ್ರಚಾರದ ವೇಳೆ ವಿಜಯವರ್ಗೀಯ ತಿಳಿಸಿದ್ದಾರೆ. 

ನೆರೆ ರಾಷ್ಟ್ರಗಳಲ್ಲಿ ಧಾರ್ಮಿಕ ಕಾರಣಗಳಿಗಾಗಿ ಹೊರದೂಡಲ್ಪಟ್ಟು ಕಿರುಕುಳ ಎದುರಿಸಿ ಭಾರತಕ್ಕೆ ಆಗಮಿಸಿರುವವರಿಗೆ ಪೌರತ್ವ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಿಎಎ ಜಾರಿಗೆ ತಂದಿದೆ ಎಂದು ಕೈಲಾಶ್ ವಿಜಯವರ್ಗೀಯ ಹೇಳಿದ್ದಾರೆ. 

ವಿಜಯವರ್ಗೀಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಟಿಎಂಸಿ ನಾಯಕ, ಸಚಿವ ಫಿರ್ಹಾದ್ ಹಕೀಮ್ ಬಿಜೆಪಿಯ ಪ್ರಕಾರ ಪೌರತ್ವ ಎಂದರೆ ಏನು? ಬಾಂಗ್ಲಾದಿಂದ ವಲಸೆ ಬಂದಿರುವ ಮತುವಾ ಸಮುದಾಯದವರು ಭಾರತದ ಪ್ರಜೆಗಳಾಗದೆಯೇ ಸಂಸತ್, ವಿಧಾನಸಭಾ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದರೇ? ಎಂದು ಪ್ರಶ್ನಿಸಿದ್ದಾರೆ.

SCROLL FOR NEXT