ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಯುವ ಸಿಂಘು ಗಡಿಗೆ ಬಂದು ಮಾತನಾಡಿದ ನಟ ಹಾಗೂ ಗಾಯಕ ದಿಲ್ಜಿತ್ ದೋಸಾಂಜ್ 
ದೇಶ

ಸರ್ಕಾರ-ರೈತ ಪ್ರತಿನಿಧಿಗಳ ಮಧ್ಯೆ 5ನೇ ಸುತ್ತಿನ ಮಾತುಕತೆ ವಿಫಲ: ಡಿ.9ಕ್ಕೆ ಮುಂದಿನ ಸಭೆ, ಪಟ್ಟು ಬಿಡದ ರೈತರು 

ತಮ್ಮ ಬೇಡಿಕೆಗಳನ್ನು ಈಡೇರಿಸಲು ತಳಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲು ಇದು ಸರಿಯಾದ ಸಮಯ, ತಮ್ಮ ಬೇಡಿಕೆಯಾದ ನೂತನ ಕೃಷಿ ಮಸೂದೆಯನ್ನು ಹಿಂಪಡೆಯದಿದ್ದರೆ ಇಲ್ಲಿಂದ ಕದಲುವುದಿಲ್ಲ ಎಂದು ಪ್ರತಿಭಟನಾ ನಿರತ ರೈತರು ಹೇಳಿರುವುದರಿಂದ ಕೇಂದ್ರ ಸರ್ಕಾರ ರೈತರ ಬೇಡಿಕೆಗಳಿಗೆ ಮಣಿದು ಸಂಧಾನಕ್ಕೆ ಮುಂದಾಗಲಿದೆ ಎಂದು ತಿಳಿದುಬಂದಿದೆ.

ನವದೆಹಲಿ: ತಮ್ಮ ಬೇಡಿಕೆಗಳನ್ನು ಈಡೇರಿಸಲು ತಳಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲು ಇದು ಸರಿಯಾದ ಸಮಯ, ತಮ್ಮ ಬೇಡಿಕೆಯಾದ ನೂತನ ಕೃಷಿ ಮಸೂದೆಯನ್ನು ಹಿಂಪಡೆಯದಿದ್ದರೆ ಇಲ್ಲಿಂದ ಕದಲುವುದಿಲ್ಲ ಎಂದು ಪ್ರತಿಭಟನಾ ನಿರತ ರೈತರು ಹೇಳಿರುವುದರಿಂದ ಕೇಂದ್ರ ಸರ್ಕಾರ ರೈತರ ಬೇಡಿಕೆಗಳಿಗೆ ಮಣಿದು ಸಂಧಾನಕ್ಕೆ ಮುಂದಾಗಲಿದೆ ಎಂದು ತಿಳಿದುಬಂದಿದೆ.

ಆದರೆ ರೈತರ ಬೇಡಿಕೆಗಳನ್ನು ಪರಿಗಣಿಸಲು ಅಂತರ ಸರ್ಕಾರ ಚರ್ಚೆ ನಡೆಸುವ ಅಗತ್ಯವಿದೆ ಎಂದು ಸರ್ಕಾರ ನಿಖರವಾಗಿ ಹೇಳಿದೆ ಎಂದು ತಿಳಿದುಬಂದಿದೆ. ಎರಡೂ ಕಡೆಯವರು ನಿನ್ನೆಯ ಸಭೆಯಲ್ಲಿ ಡಿಸೆಂಬರ್ 9ರಂದು ಬೆಳಗ್ಗೆ 11 ಗಂಟೆಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಒಪ್ಪಿಕೊಂಡಿವೆ.

ಸರ್ಕಾರದ ನಿಯೋಗದಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್, ರೈಲ್ವೆ ಸಚಿವ ಪಿಯೂಷ್ ಗೋಯಲ್, ಕೈಗಾರಿಕಾ ಸಚಿವ ಸೊಮ್ ಪ್ರಕಾಶ್ ನಿನ್ನೆಯ ಸಭೆಯಲ್ಲಿ ಭಾಗವಹಿಸಿ ಸರ್ಕಾರದ ಅಭಿಪ್ರಾಯ, ಯೋಜನೆಗಳನ್ನು ಮಂಡಿಸಿದರು. ರೈತರ ಬೇಡಿಕೆಗಳಿಗನುಗುಣವಾಗಿ ಕೃಷಿ ಮಸೂದೆಯಲ್ಲಿ ಕೆಲವು ಬದಲಾವಣೆ ತರುವ ಬಗ್ಗೆ ಮಾತನಾಡಿದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಸಭೆಯ ಮಧ್ಯೆ 15 ನಿಮಿಷಗಳ ವಿರಾಮದಲ್ಲಿ ರೈತರು ದಾಖಲೆಗಳನ್ನು ತೆಗೆದುಕೊಂಡು ಅದನ್ನು ಸರ್ಕಾರದ ಪ್ರತಿನಿಧಿಗಳ ಮುಂದಿಟ್ಟರು. ಆದರೆ ಸರ್ಕಾರದ ತಿದ್ದುಪಡಿಯನ್ನು ತಿರಸ್ಕರಿಸಿದ ರೈತರು ಎಲ್ಲಾ ಮೂರು ಕಾಯ್ದೆಗಳನ್ನು ಹಿಂತಿರುಗಿಸುವಂತೆ ಒತ್ತಾಯಿಸಿದ್ದಾರೆ. ನಿನ್ನೆಯ ಸಭೆಯ ಅಂತ್ಯಕ್ಕೆ ರೈತರು ಮೌನ ಪ್ರತಿಭಟನೆ ನಡೆಸಿ ತಮ್ಮ ಅಸಮಾಧಾನವನ್ನು ಸರ್ಕಾರದ ಮುಂದೆ ತೋರಿಸಿಕೊಂಡರು. ಹೌದು ಅಥವಾ ಅಲ್ಲ ಎಂದು ಹೇಳುವ ಫಲಕಗಳನ್ನು ಹಿಡಿದುಕೊಂಡು ಸಭೆಗೆ ಬಂದಿದ್ದ ರೈತ ಪ್ರತಿನಿಧಿಗಳು ಸರ್ಕಾರ ಕೂಡ ಹೌದು ಅಥವಾ ಅಲ್ಲ ಎಂದು ಪ್ರತಿಕ್ರಿಯೆ ನೀಡಬೇಕೆಂದು ಹೇಳಿತು.

ಫಲಕಗಳನ್ನು ನಾವು ಹಿಡಿದ ನಂತರ ಕೃಷಿ ಸಚಿವ ತೊಮರ್ ಒಳಗೆ ಹೋಗಿ ಬೇರೆಯವರ ಜೊತೆ ಚರ್ಚೆ ನಡೆಸಿ ಈ ಬಗ್ಗೆ ಸಾಕಷ್ಟು ಸಚಿವಾಲಯಗಳ ಜೊತೆ ಚರ್ಚಿಸಿ ನಾವು ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದರು. ಎರಡು ದಿನಗಳ ಸಮಯಾವಕಾಶ ನೀಡಿ ಎಂದು ಡಿಸೆಂಬರ್ 6 ಅಥವಾ 7ಕ್ಕೆ ಸಮಯ ಕೇಳಿದರು. ಡಿಸೆಂಬರ್ 8ರಂದು ಭಾರತ ಬಂದ್ ಇದ್ದು 9ರಂದು ಸಭೆ ಸೇರೋಣ ಎಂದು ಭಾರತೀಯ ಕಿಸಾನ್ ಸಂಘದ ನಾಯಕ ಬೂಟಾ ಸಿಂಗ್ ಹೇಳಿದರು. ಸಭೆಯ ಕೊನೆಗೆ ಮತ್ತೊಮ್ಮೆ ಕೃಷಿ ಸಚಿವರು ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿಕೊಂಡರೂ ರೈತರು ಒಪ್ಪಲಿಲ್ಲ.

ನಾನು ರೈತರು ಮತ್ತು ಸಂಘಗಳನ್ನು ಪ್ರತಿಭಟನೆ ಹಾದಿಯನ್ನು ಬಿಡುವಂತೆ ಒತ್ತಾಯಿಸುತ್ತೇನೆ. ಸರ್ಕಾರವು ಅವರೊಂದಿಗೆ ಹಲವಾರು ಸುತ್ತಿನ ಮಾತುಕತೆ ನಡೆಸಿದೆ ಮತ್ತು ಪರಿಹಾರಕ್ಕಾಗಿ ಹೆಚ್ಚಿನ ಚರ್ಚೆಗೆ ಸಿದ್ಧವಾಗಿದೆ ಎಂದು ಕೃಷಿ ಸಚಿವ ತೊಮರ್ ಹೇಳಿದರು. 

ತಿದ್ದುಪಡಿ ಮಾಡಿದರೆ ಕಾಯ್ದೆಯಲ್ಲಿ ಏನೂ ಇರುವುದಿಲ್ಲ ಎಂದು ಸರ್ಕಾರ ಹೇಳಿದೆ, ಆದರೆ ನಾವು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕೆಂದು ಹೇಳುತ್ತಿದ್ದೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ನ ಪಂಜಾಬ್ ಘಟಕದ ಪ್ರಧಾನ ಕಾರ್ಯದರ್ಶಿ ಹರ್ ವಿಂದರ್ ಸಿಂಗ್ ಲಖೊವಾಲ್ ತಿಳಿಸಿದ್ದಾರೆ.

ನಿನ್ನೆ ನಟ ಹಾಗೂ ಗಾಯಕ ದಿಲ್ಜಿತ್ ದೊಸನ್ಜ್ ರೈತರನ್ನು ಸಿಂಘು ಗಡಿಯಲ್ಲಿ ಭೇಟಿ ಮಾಡಿ ತಮ್ಮ ಬೆಂಬಲ ಘೋಷಿಸಿದ್ದಾರೆ. ರೈತರ ಬೇಡಿಕೆಗಳನ್ನು ಸ್ವೀಕರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವುದನ್ನು ಮಾಧ್ಯಮಗಳು ಸಹ ಉಲ್ಲೇಖಿಸಬೇಕೆಂದು ಕೇಳಿಕೊಂಡರು.

ಇಂದು ಕೂಡ ರೈತರು ಪ್ರತಿಭಟನೆ ಮುಂದುವರಿಸಿದ್ದು ಹರ್ಯಾಣ-ದೆಹಲಿಯ ಸಿಂಘು ಗಡಿಯಲ್ಲಿ ಮುಂಜಾನೆಯಿಂದಲೇ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್