ದೇಶ

ಕಾಶ್ಮೀರ: ತಪ್ಪಿಸಿಕೊಂಡ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಆರಂಭ

Lingaraj Badiger

ಶ್ರೀನಗರ: ದಕ್ಷಿಣ ಕಾಶ್ಮೀರ ಜಿಲ್ಲೆಯಾದ ಶೋಪಿಯಾನ್‌ನಲ್ಲಿ ತಪಾಸಣೆ ಇಬ್ಬರು ಉಗ್ರರು ತಪ್ಪಿಸಿಕೊಂಡ ನಂತರ ಭದ್ರತಾ ಪಡೆಗಳು ಸೋಮವಾರ ತೀವ್ರ ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ.

ಇಂದು ಸಂಜೆ ಶೋಪಿಯಾನ್‌ನಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ವಾಹನವೊಂದನ್ನು ನಿಲ್ಲಿಸಲು ಭದ್ರತಾ ಪಡೆಗಳು ಸೂಚಿಸಿವೆ. ಆದರೆ ವೇಗವಾಗಿ ಬರುತ್ತಿದ್ದ ಕಾರು ಚೆಕ್ ಪೋಸ್ಟ್ ನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನಂತರ ಉಗ್ರರು ಕಾರನ್ನು ಸ್ವಲ್ಪ ದೂರದಲ್ಲಿ ಬಿಟ್ಟು, ಫೈರ್ ಮಾಡಿ ಪರಾರಿಯಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಕಾರು ಕಾಂಗ್ರೆಸ್ ಮುಖಂಡ ಗೌಹರ್ ಹುಸೇನ್ ವಾನಿಗೆ ಸೇರಿದ್ದಾಗಿದೆ. ಉಗ್ರರ ಪತ್ತೆಗಾಗಿ ಹೆಚ್ಚು ಪಡೆಗಳನ್ನು ನಿಯೋಜಿಸುವ ಮೂಲಕ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಘಟನೆಯ ವೇಳೆ ಭದ್ರತಾ ಪಡೆಯ ಯೋಧನ ರೈಫಲ್ ಆಕಸ್ಮಿಕವಾಗಿ ಆಫ್ ಆಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT