ದೇಶ

ನೂತನ ಸಂಸತ್ ಕಟ್ಟಡದ ಶಂಕುಸ್ಥಾಪನೆ ಸಮಾರಂಭಕ್ಕೆ ಸುಪ್ರೀಂ ಕೋರ್ಟ್ ಅನುಮತಿ

Nagaraja AB

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಕಟ್ಟಡ ನಿರ್ಮಾಣಕ್ಕೆ ಡಿಸೆಂಬರ್ 10 ರಂದು ಭೂಮಿ ಪೂಜೆ ನೆರವೇರಿಸಿದ ಬಳಿಕ ಸೆಂಟ್ರಲ್ ವಿಸ್ತಾ ಯೋಜನೆಗಾಗಿ ಯಾವುದೇ ಕಟ್ಟಡವನ್ನು ಧ್ವಂಸಗೊಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್  ಸೋಮವಾರ ಹೇಳಿದೆ.

ಸರ್ಕಾರ ಷರತ್ತಿಗೆ ಒಪ್ಪಿದ್ದು, ಯಾವುದೇ ರೀತಿಯಲ್ಲಿ ಪ್ರಶ್ನಾರ್ಹವಾದ ನಿವೇಶವನ್ನು ಬದಲಾಯಿಸದೆ ಅಧಿಕಾರಿಗಳು ಔಪಚಾರಿಕ ಪ್ರಕ್ರಿಯೆಯನ್ನು ಕೈಗೊಳ್ಳಲು ಮುಕ್ತರಾಗಿದ್ದಾರೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. 

ಭೂಮಿ ಪೂಜೆ ನೆರವೇರಿಸಬಹುದು ಆದರೆ, ಯಾವುದನ್ನು ಧ್ವಂಸಗೊಳಿಸುವಂತಿಲ್ಲ, ಯಾವುದೇ ಮರಗಳನ್ನು ಕತ್ತರಿಸುವಂತಿಲ್ಲ ಎಂದು  ಸಾಲಿಟರ್  ಜನರಲ್ ತುಷಾರ್ ಮೆಹ್ತಾ ಸುಪ್ರೀಂಕೋರ್ಟ್ ಗೆ ಹೇಳಿದ್ದಾರೆ.

ಸೆಂಟ್ರಲ್ ವಿಸ್ತಾ ಯೋಜನೆಯ ಭಾಗವಾಗಿ ಸುಮಾರು 1 ಸಾವಿರ ಕೋಟಿ ರೂ. ಮೊತ್ತದ ನೂತನ ಸಂಸತ್ ಕಟ್ಟಡ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 10ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕಾಗದ ಒಪ್ಪಂದ ಮತ್ತಿತರ ಕಾರ್ಯಗಳನ್ನು ಮುಂದುವರೆಸಬಹುದು ಆದರೆ, ಯಾವುದೇ ರೀತಿಯ ಅತಿಕ್ರಮಕ್ಕೆ ಮುಂದಾಗದಂತೆ ಸುಪ್ರೀಂಕೋರ್ಟ್ , ಸಾಲಿಸಿಟರ್ ಜನರಲ್ ಗೆ ಸೂಚಿಸಿತು.

SCROLL FOR NEXT