ದೆಹಲಿಯ ಸಿಂಘು ಗಡಿಭಾಗದಲ್ಲಿ ರೈತರಿಂದ ದೆಹಲಿ ಚಲೋ ಪ್ರತಿಭಟನೆ 
ದೇಶ

ಇಂದು ಭಾರತ ಬಂದ್: ವಾಹನ ಸಂಚಾರ, ಅಗತ್ಯ ವಸ್ತುಗಳ ಪೂರೈಕೆಗೆ ತಟ್ಟಿದ ಬಿಸಿ, ಜನಸಾಮಾನ್ಯ ಚಟುವಟಿಕೆ ಎಂದಿನಂತೆ

ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಮಸೂದೆಗಳನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ರೈತ ಸಂಘಟನೆಗಳು ಮಂಗಳವಾರ ದೇಶಾದ್ಯಂತ ಕರೆ ನೀಡಿರುವ ಭಾರತ ಬಂದ್ ನಿಂದ ಸಾರಿಗೆ ಸೇವೆ, ಕಚೇರಿಗಳು, ಅಂಗಡಿ-ಮುಂಗಟ್ಟುಗಳ ತೆರೆಯುವಿಕೆ, ಹಣ್ಣು-ತರಕಾರಿ ಮಾರಾಟಗಳ ಮೇಲೆ ಪರಿಣಾಮ ಬೀರಲಿದೆ. 

ನವದೆಹಲಿ: ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಮಸೂದೆಗಳನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ರೈತ ಸಂಘಟನೆಗಳು ಮಂಗಳವಾರ ದೇಶಾದ್ಯಂತ ಕರೆ ನೀಡಿರುವ ಭಾರತ ಬಂದ್ ನಿಂದ ಸಾರಿಗೆ ಸೇವೆ, ಕಚೇರಿಗಳು, ಅಂಗಡಿ-ಮುಂಗಟ್ಟುಗಳ ತೆರೆಯುವಿಕೆ, ಹಣ್ಣು-ತರಕಾರಿ ಮಾರಾಟಗಳ ಮೇಲೆ ಪರಿಣಾಮ ಬೀರಲಿದೆ. 

ಪೊಲೀಸ್ ಬ್ಯಾರಿಕೇಡ್ ಮಧ್ಯೆ ದೆಹಲಿ ಮತ್ತು ಹರ್ಯಾಣ ಗಡಿಭಾಗಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ರೈತರು ಶಿಬಿರಗಳನ್ನು ಸ್ಥಾಪಿಸಿದ್ದು ಇಂದು ವಾಹನ ಸಂಚಾರಿಗಳಿಗೆ ಬದಲಿ ಸಂಚಾರಿ ವ್ಯವಸ್ಥೆಯನ್ನು ಸೂಚಿಸಲಾಗಿದೆ. 

ರೈತ ಸಂಘಟನೆಗಳು ಇಂದು ಹೆದ್ದಾರಿಗಳನ್ನು ಬಂದ್ ಮಾಡಿ ಟೋಲ್ ಪ್ಲಾಜಾಗಳ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಇಂದು ಶಾಂತಿಯುತ ಪ್ರತಿಭಟನೆಯಾಗಿದ್ದು ತುರ್ತು ಸೇವೆಗಳಾದ ಆಂಬ್ಯುಲೆನ್ಸ್ ಇತ್ಯಾದಿ ಸೇವೆಗಳನ್ನು ನಿಲ್ಲಿಸುವುದಾಗಲಿ, ವಿಳಂಬ ಮಾಡುವುದಾಗಲಿ ಮಾಡಬಾರದು ಎಂದು ರೈತರು ಮನವಿ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ಬಂದ್ ನಡೆಯಲಿದೆ.

ಎಂದಿನಂತೆ ಬ್ಯಾಂಕ್: ರೈತರ ಪ್ರತಿಭಟನೆಯ ವಿಷಯಕ್ಕೆ ತಮ್ಮ ಬೆಂಬಲವಿದ್ದು ಆದರೆ ಬಂದ್ ಮಾಡುವುದಿಲ್ಲ, ಎಂದಿನಂತೆ ಬ್ಯಾಂಕ್ ವ್ಯವಹಾರಗಳು ಇಂದು ನಡೆಯಲಿವೆ ಎಂದು ಬ್ಯಾಂಕ್ ಒಕ್ಕೂಟ ತಿಳಿಸಿದೆ. ಬ್ಯಾಂಕಿನ ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ಕೆಲಸದ ಅವಧಿಗಿಂತ ಮೊದಲು ಅಥನಾ ನಂತರ ಪ್ರತಿಭಟನೆ ನಡೆಸಲಿದ್ದಾರೆ. 

ಇಂದಿನ ಪ್ರತಿಭಟನೆಯಿಂದ ವಾಣಿಜ್ಯ ವಸ್ತುಗಳ ಸಾಗಾಟ, ಟ್ರಕ್ ಗಳ ಸಂಚಾರ, ಡೈರಿ ಉತ್ಪನ್ನಗಳು, ಹಣ್ಣು. ತರಕಾರಿಗಳ ಮಾರಾಟಕ್ಕೆ ವ್ಯತ್ಯಯವುಂಟಾಗಲಿದೆ. 

ದೆಹಲಿ ಮತ್ತು ಹರ್ಯಾಣ ಪೊಲೀಸರು ಪ್ರತ್ಯೇಕ ಸಂಚಾರ ಮತ್ತು ಪ್ರಯಾಣ ಸಲಹೆಗಳನ್ನು ದೆಹಲಿಗೆ ಪ್ರವೇಶಿಸುವವರಿಗೆ ಮತ್ತು ನಿರ್ಗಮಿಸುವವರಿಗೆ ನೀಡಿದೆ. 

ಕರ್ನಾಟಕದಲ್ಲಿ ಪ್ರತಿಭಟನೆ: ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆ ವಿರೋಧಿಸಿ ವಿವಿಧ ರೈತಪರ ಸಂಘಟನೆಗಳು ಕರೆ  ನೀಡಿರುವ ಭಾರತ ಬಂದ್ ಗೆ ಕರ್ನಾಟಕದಲ್ಲಿ ಸಹ ರೈತರು ಬೆಂಬಲ ಸೂಚಿಸುತ್ತಿದ್ದಾರೆ.

ಕೋಲಾರದಲ್ಲಿ ರೈತ ಸಂಘ ಸದಸ್ಯರು ರಸ್ತೆಯಲ್ಲಿ ಗ್ಯಾಸ್ ಸಿಲಿಂಡರ್ ಇರಿಸಿ ಜೋಳ ಬೇಯಿಸಿ ಪ್ರತಿಭಟನೆ ಸೂಚಕವಾಗಿ ನಡೆಸುತ್ತಿದ್ದಾರೆ.

ಬೆಂಗಳೂರು ಉಪ ನಗರ ಬಸ್ ನಿಲ್ದಾಣದ ಎದುರು ರೈತರು ಪ್ರತಿಭಟನೆ ನಡೆಸುತ್ತಾ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.

ರಾಜ್ಯದಲ್ಲಿ ಇಂದು ಎಂದಿನಂತೆ ವ್ಯಾಪಾರ, ವಹಿವಾಟು, ಚಟುವಟಿಕೆಗಳು ಇರಲಿದ್ದು ರೈತರು ಇಂದು ಬೆಂಗಳೂರು ನಗರ ಸೇರಿದಂತೆ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ, ಇದರಿಂದ ಸಂಚಾರ ದಟ್ಟಣೆಯಾಗುವ ಸಾಧ್ಯತೆಯಿದೆ.

ಒಸ್ಮಾನಿಯಾ ವಿ.ವಿ ಪರೀಕ್ಷೆ ಮುಂದೂಡಿಕೆ: ಇಂದು ನಡೆಯಬೇಕಿದ್ದ ಪರೀಕ್ಷೆಯನ್ನು ಭಾರತ ಬಂದ್ ಹಿನ್ನೆಲೆಯಲ್ಲಿ ಮುಂದೂಡಿರುವ ಒಸ್ಮಾನಿಯಾ ವಿಶ್ವವಿದ್ಯಾಲಯ ಮುಂದಿನ ದಿನಾಂಕವನ್ನು ಸದ್ಯದಲ್ಲಿಯೇ ತಿಳಿಸಲಾಗುವುದು ಎಂದು ಹೇಳಿದೆ. ನಾಳೆಯಿಂದ ನಡೆಯುವ ಪರೀಕ್ಷೆಯನ್ನು ಎಂದಿನ ಪ್ರಕಾರವೇ ನಡೆಸಲಾಗುವುದು ಎಂದು ಹೇಳಿದೆ.

ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ಮಲ್ಕಾಪುರದಲ್ಲಿ ಸ್ವಾಭಿಮಾನ ಶೆಟ್ಕರಿ ಸಂಘಟನೆ ಭಾರತ ಬಂದ್ ರೈಲು ರೋಕೋ ನಡೆಸಿ ಇಂದು ಸಂಚರಿಸುತ್ತಿದ್ದ ರೈಲನ್ನು ತಡೆದಿದೆ. ನಂತರ ಪೊಲೀಸರು ಬಂದು ಪ್ರತಿಭಟನಾಕಾರರನ್ನು ತೆರವುಗೊಳಿಸಿ ಬಂಧಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT