ದೇಶ

ಪ್ರಿಯಾಂಕಾ ಗಾಂಧಿಗೆ ಕಾಶಿ ವಿಶ್ವನಾಥ ದೇವಸ್ಥಾನ ಪ್ರವೇಶ ನಿರ್ಬಂಧ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

Lingaraj Badiger

ಲಖನೌ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಕಾಶಿ ವಿಶ್ವನಾಥ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ ವಿಧಿಸಬೇಕು ಮತ್ತು ಶಿವನ ದರ್ಶನ ಪಡೆಯಲು ಅವರಿಗೆ ಅವಕಾಶ ನೀಡಬಾರದು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಾರಣಾಸಿ ಕೋರ್ಟ್ ಬುಧವಾರ ವಜಾಗೊಳಿಸಿದೆ.

ಜಾತಿ ಅಥವಾ ಧರ್ಮದ ಹೊರತಾಗಿ ದೇವರ ಎಲ್ಲರಿಗೂ ಸೇರುತ್ತಾರೆ ಎಂದು ಸಿಜೆಎಂ ಕೋರ್ಟ್ ಹೇಳಿದೆ.

ಅರ್ಜಿ ವಜಾಗೊಳಿಸಿದ ಸಿಜೆಎಂ ಎಸ್ ಪಿ ಯಾದವ್ ಅವರು, ಕಾಶಿ ವಿಶ್ವನಾಥ ದೇವಾಲಯದ ಪ್ರಧಾನ ಅರ್ಚಕರು ವ್ಯಕ್ತಪಡಿಸಿದ ಅಭಿಪ್ರಾಯದಂತೆ ದೇವಾಲಯದಲ್ಲಿರುವ ಶಿವನು ಒಂದು ಪಂಥ ಅಥವಾ ಧರ್ಮಕ್ಕೆ ಸೇರಿಲ್ಲ ಎಂದಿದ್ದಾರೆ.

ಕ್ರಿಶ್ಚಿಯನ್ ಕುಟುಂಬದಿಂದ ಬಂದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಾರ್ಚ್ 20, 2019 ರಂದು ಕಾಶಿಯ ಗರ್ಭಗುಡಿಗೆ ಭೇಟಿ ನೀಡಿ ಪ್ರಾರ್ಥನೆ ಮಾಡುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಸೆಕ್ಷನ್ 156(3) ಸಿಆರ್‌ಪಿಸಿ ಅಡಿಯಲ್ಲಿ ವಕೀಲ ಕಮಲೇಶ್ ಚಂದ್ರ ತ್ರಿಪಾಠಿ ಅವರು ಸಿಜೆಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

SCROLL FOR NEXT