ಸಂಗ್ರಹ ಚಿತ್ರ 
ದೇಶ

ಮದುವೆ ಮನೆಯಲ್ಲಿ ಹಾಡಿನ ಬಗ್ಗೆ ವಾದ-ವಿವಾದ: ಜಗಳ ಬಿಡಿಸಲು ಹೋದ ವರನ ತಂದೆ ಸಾವು!

ಮದುವೆ ಮನೆಯಲ್ಲಿ ವಧು ಮತ್ತು ವರನ ಕುಟುಂಬದ ಗುಂಪಿನ ನಡುವೆ ನಡೆದ ಜಗಳದಲ್ಲಿ ಮದುಮಗನ ತಂದೆ ಮೃತಪಟ್ಟಿರುವ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ಗುರುವಾರ ತಿಳಿಸಿವೆ. 

ಬುಲಂದ್ ಶಹರ್: ಮದುವೆ ಮನೆಯಲ್ಲಿ ವಧು ಮತ್ತು ವರನ ಕುಟುಂಬದ ಗುಂಪಿನ ನಡುವೆ ನಡೆದ ಜಗಳದಲ್ಲಿ ಮದುಮಗನ ತಂದೆ ಮೃತಪಟ್ಟಿರುವ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ಗುರುವಾರ ತಿಳಿಸಿವೆ. 

ಬುಲಂದ್‌ಶಹರ್‌ನ ಗಜ್ರೌಲಾ ಪಟ್ಟಣದಿಂದ ಬುಧವಾರ ರಾತ್ರಿ ವಿವಾಹ ಮೆರವಣಿಗೆ ಬಂದಿತ್ತು. ವಧು ಮತ್ತು ಮದುಮಗನ ಕುಟುಂಬಗಳ ಜನರು ವಿವಿಧ ಹಾಡುಗಳಿಗೆ ನೃತ್ಯ ಮಾಡುತ್ತಿದ್ದರು. ನೃತ್ಯದ ಸಮಯದಲ್ಲಿ, ಎರಡೂ ಗುಂಪುಗಳು ಹಾಡಿನ ಬಗ್ಗೆ ವಾದಿಸಲು ಪ್ರಾರಂಭಿಸಿದವು ಎನ್ನಲಾಗಿದೆ. 

ಏತನ್ಮಧ್ಯೆ, ಮದುಮಗನ ತಂದೆ ಹರ್ಪಾಲ್ ಸಿಂಗ್ ಅಲ್ಲಿಗೆ ತಲುಪಿ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದರು ಆದರೆ ವಧುವಿನ ಕುಟುಂಬದ ಹಲವಾರು ವ್ಯಕ್ತಿಗಳು ಆತನ ಮೇಲೆ ಹಲ್ಲೆ ನಡೆಸಿದಾಗ, ಪ್ರಜ್ಞೆ ತಪ್ಪಿ ಗಾಯಗೊಂಡು ಸಾವನ್ನಪ್ಪಿದ್ದಾರೆ.

ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಸಂತೋಷ್ ಕುಮಾರ್ ಸಿಂಗ್ ಮಾತನಾಡಿ, ಹರ್ಪಾಲ್ ಸಿಂಗ್ ಅವರ ಸಾವು ಹೃದಯಾಘಾತದಿಂದ ಸಂಭವಿಸಿದೆ ಎಂದು ತೋರುತ್ತದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಇತರ ವಿವರಗಳು ವರದಿಯಿಂದ ಹೊರಬರಲಿದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT