ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ 
ದೇಶ

ಶರದ್ ಪವಾರ್ ಪ್ರಧಾನಿಯಾಗದಿರಲು ಕಾಂಗ್ರೆಸ್ ಗುಂಪುಗಾರಿಕೆ ಕಾರಣ: ಎನ್ ಸಿಪಿ ಮುಖಂಡ ಪ್ರಫುಲ್ ಪಟೇಲ್

 ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ ಸಿಪಿ) ಮುಖ್ಯಸ್ಥ ಹಾಗೂ ಹಿರಿಯ ರಾಜಕಾರಣಿ ಶರದ್ ಪವಾರ್ 1990ರಲ್ಲಿ ಪ್ರಧಾನಿಯಾಗದಿರಲು ಕಾಂಗ್ರೆಸ್ ಗುಂಪುಗಾರಿಕೆ ಕಾರಣ ಎಂದು ಪಕ್ಷದ ಹಿರಿಯ ಮುಖಂಡ ಪ್ರಪುಲ್ ಪಟೇಲ್ ಹೇಳಿದ್ದಾರೆ.

ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ ಸಿಪಿ) ಮುಖ್ಯಸ್ಥ ಹಾಗೂ ಹಿರಿಯ ರಾಜಕಾರಣಿ ಶರದ್ ಪವಾರ್ 1990ರಲ್ಲಿ ಪ್ರಧಾನಿಯಾಗದಿರಲು ಕಾಂಗ್ರೆಸ್ ಗುಂಪುಗಾರಿಕೆ ಕಾರಣ ಎಂದು ಪಕ್ಷದ ಹಿರಿಯ ಮುಖಂಡ ಪ್ರಪುಲ್ ಪಟೇಲ್ ಹೇಳಿದ್ದಾರೆ. ಶರದ್ ಪವಾರ್ ಅವರ 80ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮಾತನಾಡಿರುವ ಪ್ರಫುಲ್ ಪಟೇಲ್, ಈ ಅಪೂರ್ಣವಾದ ಕನಸು ನನಸಾಗಬಹುದು ಎಂದಿದ್ದಾರೆ.

ಶರದ್ ಪವಾರ್ ಅತಿ ಕಡಿಮೆ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು. 1991 ಮತ್ತು 1996ರಲ್ಲಿ ಅವರು ಪ್ರಧಾನಿಯಾಗದಂತೆ ತಡೆಯಲಾಯಿತು. ದೆಹಲಿಯ ಸ್ವಜನಪಕ್ಷಪಾತ ರಾಜಕಾರಣ ಇದಕ್ಕೆ ಅಡ್ಡಿಯಾಯಿತು. ಇದರಿಂದ ಅವರಿಗೆ ವೈಯಕ್ತಿಕವಾಗಿ ನಷ್ಟವಾಯಿತು. ಆದಾಗ್ಯೂ, ದೇಶ ಹಾಗೂ ಪಕ್ಷಕ್ಕೆ ಸಾಕಷ್ಟು ನಷ್ಟವನ್ನುಂಟು ಮಾಡಿತು ಎಂದು ಪತ್ರಿಕೆಯೊಂದರ ಅಂಕಣದಲ್ಲಿ ಪ್ರಫುಲ್ ಪಟೇಲ್ ಬರೆದಿದ್ದಾರೆ.

ದೆಹಲಿಯಲ್ಲಿನ ಕಾಂಗ್ರೆಸ್ ಗುಂಪೊಂದು ಮಹಾರಾಷ್ಟ್ರದ ಪ್ರಭಾವಿ ನಾಯಕನನ್ನು ದುರ್ಬಲಗೊಳಿಸಲು ರಾಜ್ಯ ಘಟಕದಲ್ಲಿ ದಂಗೆ ಏಳುವಂತೆ ಮಾಡಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

ತಮ್ಮ ಲೇಖನ ಕುರಿತಂತೆ ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಫುಲ್ ಪಟೇಲ್, ಶರದ್ ಪವಾರ್ ಪ್ರಧಾನಿಯಾಗುವ ಅವಕಾಶ ಎರಡು ಬಾರಿ ಕೈ ತಪ್ಪಿದೆ. ಇದೀಗ ಇಡೀ ಮಹಾರಾಷ್ಟ್ರ ಅವರ ಹಿಂದಿದ್ದರೆ ಅವರ ಅಪೂರ್ಣ ಕನಸು ನನಸಾಗಬಹುದು ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಇದ್ದಾಗ ನೋಡಿದ್ದನ್ನು ಬರೆದಿರುವುದಾಗಿ ಎನ್ ಸಿಪಿ ಪ್ರಧಾನ ಕಾರ್ಯದರ್ಶಿ ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!

ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಭಾರತ ಹೆಚ್ಚಿನ ಸುಂಕ ವಿಧಿಸಬೇಕು: ಕೇಜ್ರಿವಾಲ್

SCROLL FOR NEXT