ಸಾಂದರ್ಭಿಕ ಚಿತ್ರ 
ದೇಶ

ಸ್ನೇಹಿತನ ಪತ್ನಿಗೆ ಡ್ರಗ್ ನೀಡಿ ಅತ್ಯಾಚಾರ: ಸೇನಾಧಿಕಾರಿ ವಿರುದ್ಧ ಪ್ರಕರಣ ದಾಖಲು

ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಸೇನೆಯ ಕಲೋನಿಯಲ್ ವಿರುದ್ಧ ಭಾನುವಾರ ದೂರು ದಾಖಲಾಗಿದೆ.

ಕಾನ್ಪುರ: ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಸೇನೆಯ ಕಲೋನಿಯಲ್ ವಿರುದ್ಧ ಭಾನುವಾರ ದೂರು ದಾಖಲಾಗಿದೆ.

ಸಂತ್ರಸ್ತೆಯ ಪತಿ, ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಸೇನಾಧಿಕಾರಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಪೂರ್ವ) ರಾಜ್ ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ.

ತಮ್ಮ ಪತ್ನಿ ರಷ್ಯಾ ಮೂಲದವರಾಗಿದ್ದು ಕಳೆದ 10 ವರ್ಷದಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಅಧಿಕಾರಿಗಾಗಿ ಶೋಧ ಮುಂದುವರಿಸಿದ್ದಾರೆ. ಸೇನಾಧಿಕಾರಿ ಬಡ್ತಿ ಸಿಕ್ಕಿದ್ದಕ್ಕಾಗಿ ತಮ್ಮನ್ನು ಅವರ ಮನೆಗೆ ಪಾರ್ಟಿಗೆ ಆಹ್ವಾನಿಸಿದ್ದರು. 

ಈ ವೇಳೆ ಪ್ರಜ್ಞೆ ತಪ್ಪಿಸಲು ನನಗೆ ಮಾದಕ ದ್ರವ್ಯ ನೀಡಿದ ಆರೋಪಿ ತನ್ನ ಹೆಂಡತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಆಕೆ ಇದಕ್ಕೆ ಪ್ರತಿರೋಧನ್ನು ವ್ಯಕ್ತಪಡಿಸಿದಾಗ ಆರೋಪಿ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಲು ಪೊಲೀಸರು ಶೋಧ ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಧ್ಯಪ್ರಾಚ್ಯ ಸಂಘರ್ಷ: ಅಮೆರಿಕಾ ನಂಬಿಕೆಗೆ ಅರ್ಹವಲ್ಲ, ಭಾರತ ಬಂದರೆ ಶಾಂತಿ ಸಾಧ್ಯ; ಇರಾನ್

ಇರಾನ್ ಅಣ್ವಸ್ತ್ರ ಹೊಂದಬಾರದು, ಹಾರ್ಮುಜ್ ಜಲಸಂಧಿ ಮುಕ್ತವಾಗಿರಬೇಕು: ಅಮೆರಿಕಾ ನಿಲುವಿಗೆ ಚೀನಾ ಸಹಮತ

NEET ರದ್ದು: 650 ಅಂಕ ನಿರೀಕ್ಷಿಸಿದ್ದ ವಿದ್ಯಾರ್ಥಿ ನೇಣಿಗೆ ಶರಣು; ‘ಭ್ರಷ್ಟ ವ್ಯವಸ್ಥೆಯೇ ಕಾರಣ’- ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಕಿಡಿ

ದಳಪತಿ ವಿಜಯ್ ಪ್ರಧಾನ ಮಂತ್ರಿಯಾಗುತ್ತಾರಾ? ತಮಿಳು ನಾಡು ಸಿಎಂ ರಾಜಕೀಯ ಭವಿಷ್ಯ ನುಡಿದ ಜ್ಯೋತಿಷಿ ರಾಧನ್ ಪಂಡಿತ್-Video

ರೈತರು ಎರಡೇಟು ಹೊಡೆದರೂ, ನನ್ನ ಬಟ್ಟೆ ಹರಿದರೂ ಬಿಡದಿ ಟೌನ್‌ಶಿಪ್‌ ಮಾಡಿಯೇ ಸಿದ್ದ: ಡಿ ಕೆ ಶಿವಕುಮಾರ್

SCROLL FOR NEXT