ದೇಶ

ಕೇಂದ್ರದಿಂದ 23 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಿಗೆ 6 ಸಾವಿರ ಕೋಟಿ ರೂ. ಜಿಎಸ್‌ಟಿ ಹಣ ಬಿಡುಗಡೆ

Vishwanath S

ನವದೆಹಲಿ: ಜಿಎಸ್‌ಟಿ ಪರಿಹಾರದ ಕೊರತೆಯನ್ನು ಪೂರೈಸಲು ಕೇಂದ್ರ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಏಳನೇ ವಾರದ ಕಂತಾಗಿ ಒಟ್ಟು 6 ಸಾವಿರ ಕೋಟಿ ರೂ. ಬಿಡುಗಡೆಗೊಳಿಸಿದೆ.

23 ರಾಜ್ಯಗಳಿಗೆ 5,516.60 ಕೋಟಿ ರೂ. ಮತ್ತು ದೆಹಲಿ, ಜಮ್ಮು ಮತ್ತು ಕಾಶ್ಮೀರ ಮತ್ತು ಪುದುಚೆರಿಗಳಿಗೆ ಒಟ್ಟು 483.40 ಕೋಟಿ ರೂ. ವಿತರಿಸಿದೆ. ಜಿಎಸ್‌ಟಿ ಜಾರಿಯಲ್ಲಿ ಆದಾಯ ಹೆಚ್ಚಿಸಲು 1.10 ಲಕ್ಷ ಕೋಟಿ ರೂ. ಕೊರತೆಯನ್ನು ನೀಗಿಸುವ ಸಲುವಾಗಿ ಸರ್ಕಾರ ಅಕ್ಟೋಬರ್‌ನಲ್ಲಿ ವಿಶೇಷ ಸಾಲದ ಗವಾಕ್ಷಿ ರಚಿಸಿತ್ತು. 

ಈ ಸಾಲವನ್ನು 7 ಕಂತುಗಳಲ್ಲಿ ಮಾಡಲಾಗಿದೆ. ಈ ಮೊತ್ತವನ್ನು ಅ. 23, ನ. 2, ನ. 9, ನ.23, ಡಿ. 1, ಡಿ.7 ಮತ್ತು ಡಿ.14 ರಂದು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ.

ಈ ಮೊತ್ತವನ್ನು ಈ ವಾರ ಶೇ.5.1348 ರಷ್ಟು ಬಡ್ಡಿದರದಲ್ಲಿ ಎರವಲು ಪಡೆಯಲಾಗಿದೆ. ಇಲ್ಲಿಯವರೆಗೆ ಕೇಂದ್ರ ಸರ್ಕಾರವು ವಿಶೇಷ ಸಾಲ ಪಡೆಯುವ ಗವಾಕ್ಷಿ ಮೂಲಕ ಸರಾಸರಿ 4.7712 ರಷ್ಟು ಬಡ್ಡಿದರದಲ್ಲಿ 42,000 ಕೋಟಿ ರೂ. ವಿತರಿಸಲಾಗಿದೆ.

SCROLL FOR NEXT