ದೇಶ

ಕೋವಿಡ್-19: ಕೋಲ್ಡ್ ಚೈನ್ ಲಸಿಕೆ ನಿರ್ವಹಣೆಗೆ 500 ಮಂದಿ ಸ್ಪೈಸ್ ಎಕ್ಸ್ ಪ್ರೆಸ್ ಉದ್ಯೋಗಿಗಳಿಗೆ ಮೈಲಾಜಿಸ್ಟಿಕ್ಸ್ ತರಬೇತಿ 

Srinivas Rao BV

ನವದೆಹಲಿ: ಕೊರೋನಾ ಲಸಿಕೆಯ ಕೋಲ್ಡ್ ಚೈನ್ ನಿರ್ವಹಣೆಗಾಗಿ ಸ್ಪೈಸ್ ಜೆಟ್ ನ ಕಾರ್ಗೋ ವಿಭಾಗ ಸ್ಪೈಸ್ ಎಕ್ಸ್ ಪ್ರೆಸ್ ನ 500 ಸಿಬ್ಬಂದಿಗಳಿಗೆ ಮೈ ಲಾಜಿಸ್ಟಿಕ್ಸ್ ಗುರುಕುಲ್ ತರಬೇತಿ ನೀಡಲಿದೆ.

ದೆಹಲಿ ಮೂಲದ ತರಬೇತಿ ಅಕಾಡೆಮಿ 2 ದಿನಗಳ ಕಾಲ 4 ಗಂಟೆಗಳು ಪ್ರತಿ ಬ್ಯಾಚ್ ಗೆ ತರಬೇತಿ ನೀಡಲಿದ್ದು, ಪ್ರತಿ ಬ್ಯಾಚ್ 25 ಮಂದಿ ಇರಲಿದ್ದಾರೆ. 

ಕೋವಿಡ್-19 ಲಸಿಕೆ ತಯಾರಿಸುತ್ತಿರುವ ಪಿಫೈಝರ್, ಭಾರತ್ ಬಯೋಟೆಕ್ ಹಾಗೂ ಸೆರಮ್ ಇನ್ಸ್ಟಿಟ್ಯೂಟ್ ಡಿಸಿಜಿಐ ಗೆ ಲಸಿಕೆ ತುರ್ತು ಬಳಕೆಗಾಗಿ ಅನುಮತಿ ಕೋರಿವೆ.

ಮುಂದಿನ ವರ್ಷ ಆಕ್ಸ್ಫರ್ಡ್-ಆಸ್ಟ್ರಾಝೆನಿಕಾದ ಲಸಿಕೆ ಲಭ್ಯವಾಗಲಿದೆ. ಲಸಿಕೆ ಮಾರುಕಟ್ಟೆಗೆ ಬಂದಾಗ ಅದರ ಸೂಕ್ತ ನಿರ್ವಹಣೆಗಾಗಿ ಈಗಿನಿಂದಲೇ ತಯಾರಿ ನಡೆದಿದೆ.

SCROLL FOR NEXT