ದೇಶ

ರೈಲ್ವೆಯಲ್ಲಿ 1.4 ಲಕ್ಷ ಹುದ್ದೆಗಳ ನೇಮಕಾತಿ: ಇಂದಿನಿಂದ ಮೂರು ಹಂತಗಳ ಪರೀಕ್ಷೆ

Lingaraj Badiger

ನವದೆಹಲಿ: ಕೋವಿಡ್- 19 ಸೋಂಕು ನಡುವೆಯೂ ದೇಶಾದ್ಯಂತ ರೈಲ್ವೆ ಇಲಾಖೆಯಲ್ಲಿ 1.4 ಲಕ್ಷ ಖಾಲಿ ಹುದ್ದೆಗಳ ಭರ್ತಿಗೆ ರೈಲ್ವೇ ನೇಮಕಾತಿ ಮಂಡಳಿಗಳ ಮೂಲಕ ಇಂದಿನಿಂದ ಮೂರು ಹಂತಗಳಲ್ಲಿ ಬೃಹತ್ ನೇಮಕಾತಿ ಪರೀಕ್ಷೆ ಆರಂಭವಾಗಿದೆ.

ಹಲವು ನಗರಗಳಲ್ಲಿ ನೇಮಕಾತಿ ಪರೀಕ್ಷೆ ನಡೆಯುತ್ತಿದ್ದು, 2.44 ಕೋಟಿ ಅಭ್ಯರ್ಥಿಗಳು ಈ ಪರೀಕ್ಷೆ ಬರೆಯುತ್ತಿದ್ದಾರೆ. ಇದೇ 18ರ ವರೆಗೆ ಮೊದಲ ಹಂತದ ಪರೀಕ್ಷೆ ನಡೆಯಲಿದೆ.

ಎನ್ ಟಿ ಪಿ ಸಿ ವಿಭಾಗದೊಂದಿಗೆ ಡಿಸೆಂಬರ್ ೨೮ ರಿಂದ ಮುಂದುವರಿಯುವ ಪರೀಕ್ಷೆಗಳು ೨೦೨೧ರ ಮಾರ್ಚ್‌ವರೆಗೆ ಮತ್ತು ೩ ನೇ ಹಂತದ ಪರೀಕ್ಷೆಗಳು ೨೦೨೧ರ ಏಪ್ರಿಲ್‌ನಿಂದ ಜೂನ್‌ವರೆಗೆ ನಡೆಯಲು ವೇಳಾಪಟ್ಟಿ ಪ್ರಕಟಿಸಲಾಗಿದೆ.

ರೈಲ್ವೆ ನೇಮಕಾತಿ ಮಂಡಳಿ ಕೋವಿಡ್ 19 ಸೋಂಕು ನಿಯಂತ್ರಣ ಕ್ರಮಗಳ ನಡುವೆ ಪರೀಕ್ಷೆ ನಡೆಸಲಾಗುತ್ತಿದೆ. ಅಭ್ಯರ್ಥಿಗಳು ಪರೀಕ್ಷೆಗೂ ಮುಂಚೆ ನಿಗದಿತ ನಮೂನೆಯಲ್ಲಿ ಕೋವಿಡ್-೧೯ ಸ್ವಯಂ ಘೋಷಣಾ ಪತ್ರವನ್ನು ಹಾಜರುಪಡಿಸಬೇಕು. ಒಂದು ವೇಳೆ ಘೋಷಣಾ ಪತ್ರ ಹಾಜರುಪಡಿಸಲಾಗದಿದ್ದಲ್ಲಿ ಅಂಥ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶವಿರುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಎರಡು ಪಾಳಿಗಳಲ್ಲಿ ಪರೀಕ್ಷೆ ನಡೆಯಲಿದ್ದು. ಒಂದು ಪಾಳಿಯ ಪರೀಕ್ಷಾ ಕೊಠಡಿಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿ ಸೋಂಕು ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

SCROLL FOR NEXT