ದೇಶ

ಸಂಧಾನ ಯಶಸ್ವಿ; ಏಮ್ಸ್ ನರ್ಸ್ ಗಳ ಮುಷ್ಕರ ವಾಪಸ್

Srinivasamurthy VN

ನವದೆಹಲಿ: ವಿವಿಧ ಬೇಡಿಕಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದ ಏಮ್ಸ್ ನರ್ಸ್ ಗಳು ಇದೀಗ ಸಂಧಾನ ಸಭೆ ಯಶಸ್ವಿಯಾದ ಹಿನ್ನಲೆಯಲ್ಲಿ ತಮ್ಮ ಅಹೋರಾತ್ರಿ ಮುಷ್ಕರ ವಾಪಸ್ ಪಡೆದಿದ್ದಾರೆ.

6ನೇ ಕೇಂದ್ರ ವೇತನ ಆಯೋಗ ಜಾರಿ, ವೇತನ ಏರಿಕೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಏಮ್ಸ್ ನರ್ಸ್ ಗಳು ನಡೆಸುತ್ತಿದ್ದ ಮುಷ್ಕರ ಅಂತ್ಯಗೊಂಡಿದೆ. ನಿನ್ನೆ ಏಮ್ಸ್ ನರ್ಸ್ ಯೂನಿಯನ್​ನ 5,000 ಸದಸ್ಯರು ಏಕಾಏಕಿ ಅನಿರ್ದಿಷ್ಟಾವಧಿ ಮುಷ್ಕರಕ್ಕಿಳಿದಿದ್ದರು. ಈ ಹಿನ್ನೆಲೆಯಲ್ಲಿ ಇಂದು ಏಮ್ಸ್ ಆಡಳಿತಾಧಿಕಾರಿಗಳು ನರ್ಸ್​​ಗಳನ್ನು ಮಾತುಕತೆಗೆ ಕರೆದಿದ್ದರು. ಸಂಧಾನ ಸಫಲವಾದ ಹಿನ್ನೆಲೆ ನರ್ಸ್​ಗಳು ಮುಷ್ಕರವನ್ನು ಹಿಂಪಡೆದು ಮತ್ತೆ ಕೆಲಸಕ್ಕೆ ಮುಂದಾಗಿದ್ದಾರೆ.

ನರ್ಸ್​ಗಳು ಮುಂದಿಟ್ಟಿದ್ದ ಬೇಡಿಕೆಗಳ ಪೈಕಿ ಮತ್ತೊಂದು ಬೇಡಿಕೆ ಹೊರಗುತ್ತಿಗೆ ಅಡಿ ನರ್ಸ್​​ಗಳನ್ನು ನೇಮಿಸಿಕೊಳ್ಳುವುದನ್ನು ನಿಲ್ಲಿಸಿ ಎಂಬುದಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಆಡಳಿತ ಮಂಡಳಿ. ಹೊರಗುತ್ತಿಗೆ ಅಡಿ ನರ್ಸ್​ಗಳನ್ನು ನೇಮಿಸಿಕೊಳ್ಳುವ ಯೋಜನೆ ಇಲ್ಲ. ಅವರು ಮುಷ್ಕರ  ಮುಂದುವರಿಸಿದರೆ ಮತ್ತು ನಮ್ಮ ಮಾತನ್ನು ಕೇಳದಿದ್ದಾಗ ಮಾತ್ರ ಮುಂದಿನ ಎರಡು ಮೂರು ದಿನಗಳಲ್ಲಿ ಯೋಜನೆ ಜಾರಿ ಮಾಡುವ ಚಿಂತನೆ ಮಾಡುತ್ತೇವೆ ಎಂದು ಹೇಳಿದ್ದರು.

ಸದ್ಯ ಮುಷ್ಕರ ಹಿಂಪಡೆದ ನರ್ಸ್​​ಗಳನ್ನು ಮನವೊಲಿಸುವಲ್ಲಿ ಆಡಳಿತ ಮಂಡಳಿ ಯಶಸ್ವಿಯಾಗಿದೆಯಾ ಅಥವಾ ನರ್ಸ್ ಯೂನಿಯನ್ ಮುಂದಿಟ್ಟಿದ್ದ ಬಹುತೇಕ ಬೇಡಿಕೆಗಳಿಗೆ ಒಪ್ಪಿಗೆ ನೀಡಿದೆಯೇ ಎಂಬುದು ನಿಖರವಾಗಿ ತಿಳಿದುಬಂದಿಲ್ಲ.

SCROLL FOR NEXT