ದೇಶ

ನನ್ನನ್ನು ಖರೀದಿಸಲು ಯಾರಿಂದಲೂ ಸಾಧ್ಯವಿಲ್ಲ: ಮಮತಾ ಬ್ಯಾನರ್ಜಿಗೆ ಒವೈಸಿ ತಿರುಗೇಟು

Srinivasamurthy VN

ಕೋಲ್ಕತಾ: ನನ್ನನ್ನು ಖರೀದಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ತಿರುಗೇಟು ನೀಡಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಒವೈಸಿ ವಿರುದ್ಧ ಕಿಡಿಕಾರಿದ್ದ ಮಮತಾ ಬ್ಯಾನರ್ಜಿ, ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸಲು, ಬಿಜೆಪಿಗೆ ಹೈದರಾಬಾದ್ ಮೂಲದ ಪಕ್ಷವೊಂದು ಸಹಾಯ ಮಾಡುತ್ತದೆ ಎಂದು ಹೇಳಿದ್ದರು. ನೇರವಾಗಿ ಒವೈಸಿ ವಿರುದ್ಧವೇ ಕಿಡಿಕಾರಿದ್ದ  ಮಮತಾ, ಅಲ್ಪಸಂರಖ್ಯಾತರಮತಗಳನ್ನು ವಿಭಜಿಸಲು ಬಿಜೆಪಿಗೆ ಹೈದರಾಬಾದ್ ಮೂಲದ ಪಕ್ಷವೊಂದು ಸಹಾಯ ಮಾಡುತ್ತದೆ. ಬಿಜೆಪಿ ಆ ಪಕ್ಷಕ್ಕೆ ಹೇರಳವಾಗಿ ಧನಸಹಾಯ ಮಾಡುತ್ತದೆ. ಇತ್ತೀಚಿಗೆ ನಡೆದ ಬಿಹಾರ ವಿಧಾನಸಭೆ ಚುನಾವಣೆಯೇ ಇದಕ್ಕೆ ನಿದರ್ಶನ ಎಂದು ಮಮತಾ ಬ್ಯಾನರ್ಜಿ ಒವೈಸಿ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದರು, 

ಈ ಆರೋಪಕ್ಕೆ ಇದೀಗ ತಿರುಗೇಟು ನೀಡಿರುವ ಒವೈಸಿ, ನನ್ನನ್ನು ಮತ್ತು ನನ್ನ ಪಕ್ಷವನ್ನು ಹಣದಿಂದ ಖರೀದಿ ಮಾಡಲು ಜಗತ್ತಿನಲ್ಲಿ ಯಾರಿಂದಲೂ ಸಾಧ್ಯವಿಲ್ಲ, ಅಂತಹ ವ್ಯಕ್ತಿ ಈ ವರೆಗೂ ಹುಟ್ಟಿಲ್ಲ. ಮುಂದೆ ಹುಟ್ಟುವುದೂ ಇಲ್ಲ, ಮುಸ್ಲಿಂ ಮತದಾರರು ಮಮತಾ ಅವರ "ಜಾಗೀರ್" ಅಥವಾ  ಆಸ್ತಿಯಲ್ಲ. ಮಮತಾ ಬ್ಯಾನರ್ಜಿ ಅವರ ಆರೋಪದಲ್ಲಿ ಯಾವುದೇ ರೀತಿಯ ಹುರುಳಿಲ್ಲ. ಅವರ ಆರೋಪಗಳೆಲ್ಲವೂ ಆಧಾರರಹಿತ, ಮೊದಲು ಮಮತಾ ಅವರು ತಮ್ಮ ಸ್ವಂತ ಪಕ್ಷದ ಕುರಿತು ಚಿಂತಿಸಬೇಕು. ಅವರದೇ ಪಕ್ಷದ ನಾಯಕರು ಪಕ್ಷ ತೊರೆದು ಬಿಜೆಪಿಗೆ ತೆರಳುತ್ತಿದ್ದಾರೆ ಎಂದು ಹೇಳಿದರು.

ಅಂತೆಯೇ ಮಮತಾ ಅವರು ಈ ಆರೋಪಗಳ ಮೂಲಕ ನಮಗೆ ಮತ ಹಾಕಿದ ಬಿಹಾರದ ಮತದಾರರನ್ನು ಅವಮಾನಿಸುತ್ತಿದ್ದಾರೆ ಎಂದು ಒವೈಸಿ ಕಿಡಿಕಾರಿದರು.

SCROLL FOR NEXT