ಪ್ರಧಾನಿ ನರೇಂದ್ರ ಮೋದಿ 
ದೇಶ

ಪಿಎಂ ಕೇರ್ಸ್ ಫಂಡ್ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಪ್ರಶ್ನೆಗಳ ಸುರಿಮಳೆ: ವಿರೋಧ ಪಕ್ಷಕ್ಕೆ ಅಕ್ರಮದ ಶಂಕೆ!

ಪಿಎಂ ಕೇರ್ಸ್ ಫಂಡ್ ಬಗ್ಗೆ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನೆ ಮಾಡಿದೆ. ಭಾರತೀಯ ರಾಯಭಾರಿಗಳ ಮೂಲಕ ಪಿಎಂ ಕೇರ್ಸ್ ಫಂಡ್ ಮೂಲಕ ಹಣ ಸಂದಾಯವಾದ ಬಗ್ಗೆ ಸಹ ಮಾಹಿತಿ ನೀಡಿ ಎಂದು ಕಾಂಗ್ರೆಸ್ ನಾಯಕ ರಂದೀಪ್ ಸಿಂಗ್ ಸುರ್ಜೆವಾಲಾ ಒತ್ತಾಯಿಸಿದ್ದಾರೆ.

ನವದೆಹಲಿ: ಪಿಎಂ ಕೇರ್ಸ್ ಫಂಡ್ ಬಗ್ಗೆ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನೆ ಮಾಡಿದೆ. ಭಾರತೀಯ ರಾಯಭಾರಿಗಳ ಮೂಲಕ ಪಿಎಂ ಕೇರ್ಸ್ ಫಂಡ್ ಮೂಲಕ ಹಣ ಸಂದಾಯವಾದ ಬಗ್ಗೆ ಸಹ ಮಾಹಿತಿ ನೀಡಿ ಎಂದು ಕಾಂಗ್ರೆಸ್ ನಾಯಕ ರಂದೀಪ್ ಸಿಂಗ್ ಸುರ್ಜೆವಾಲಾ ಒತ್ತಾಯಿಸಿದ್ದಾರೆ.

ಚೀನಾ, ಪಾಕಿಸ್ತಾನ ಮತ್ತು ಕತಾರ್ ಸೇರಿದಂತೆ ಹಲವು ದೇಶಗಳಿಂದ ಪಿಎಂ ಕೇರ್ಸ್ ಫಂಡ್ ಗೆ ಹಣ ಸಂದಾಯವಾಗಿದೆ ಇಂತಹ ಸಂದರ್ಭದಲ್ಲಿ ಪ್ರಧಾನಿಯವರಿಗೆ ಕೇಳುವ ಪ್ರಶ್ನೆಗಳು, ಪಿಎಂ ಕೇರ್ಸ್ ಫಂಡ್ ಗೆ ಭಾರತೀಯ ರಾಯಭಾರಿಗಳು ಹಣವನ್ನು ಏಕೆ ಪಡೆಯಬೇಕು, ಚೀನಾದ ನಿಷೇಧಿತ ಆಪ್ ಗಳನ್ನು ಏಕೆ ಜಾಹೀರಾತು ಮಾಡಲಾಯಿತು ಎಂದು ಸುರ್ಜೆವಾಲ್ ಪ್ರಶ್ನಿಸಿದ್ದಾರೆ.

ಪಾಕಿಸ್ತಾನದಿಂದ ಈ ಫಂಡ್ ಗೆ ಬಂದಿರುವ ಹಣವೆಷ್ಟು, ಅದನ್ನು ಕೊಟ್ಟವರು ಯಾರು ಮತ್ತು ಕತಾರ್ ನಿಂದ ಹಣ ಸಂದಾಯ ಮಾಡಿರುವವರು ಯಾರು ಮತ್ತು ಎಷ್ಟು ಕೋಟಿ ಪಡೆಯಲಾಗಿದೆ ಎಂದು ಸರ್ಕಾರ ಬಹಿರಂಗಪಡಿಸಬೇಕು ಎಂದು ಕೇಳಿದ್ದಾರೆ.

27 ವಿದೇಶಿ ರಾಷ್ಟ್ರಗಳಿಂದ ಎಷ್ಟು ಸಾವಿರಾರು ಕೋಟಿ ರೂಪಾಯಿಗಳು ಬಂದಿವೆ, ಈ 27 ರಾಷ್ಟ್ರಗಳಿಂದ ಬಂದ ಹಣವನ್ನು ರಹಸ್ಯವಾಗಿ ಏಕೆ ಇಡಲಾಗಿದೆ, ಸಾರ್ವಜನಿಕವಾಗಿ ಏಕೆ ಬಹಿರಂಗಪಡಿಸಿಲ್ಲ, ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕ ಪ್ರಾಧಿಕಾರದ ಮೂಲಕ ಏಕೆ ಈ ಬಗ್ಗೆ ಮಾಹಿತಿ ಸಿಗುತ್ತಿಲ್ಲ ಎಂದು ಸುರ್ಜೆವಾಲಾ ಟ್ವೀಟ್ ಮೂಲಕ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
ಸಿಎಜಿ(ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ) ಅಥವಾ ಭಾರತ ಸರ್ಕಾರ ಏಕೆ ಹಣದ ಲೆಕ್ಕಪರಿಶೋಧನೆ ನಡೆಸಿಲ್ಲ ಎಂದು ಕೇಳಿದ್ದಾರೆ.

ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಬಂದು ತೀವ್ರ ಆರ್ಥಿಕ ಸಂಕಷ್ಟ ಉಂಟಾದ ಹಿನ್ನೆಲೆ ಯಲ್ಲಿ, ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಅಥವಾ ಇನ್ನಾವುದೇ ರೀತಿಯ ಪರಿಹಾರ ಅಥವಾ ಸಹಾಯವನ್ನು ಕೈಗೊಳ್ಳಲು ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿಯಲ್ಲಿ (PM -CARES fund) ಸ್ಥಾಪಿಸಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT