ದೇಶ

ಸಿಎಂಎಸ್01 ಉಪಗ್ರಹವನ್ನು ಹೊತ್ತ ಪಿಎಸ್ಎಲ್ ವಿ ಸಿ50 ರಾಕೆಟ್ ಉಡಾವಣೆ ಯಶಸ್ವಿ

Srinivasamurthy VN

ಶ್ರೀಹರಿಕೋಟಾ: ಸಂಪರ್ಕ ಸೇವೆಗೆ ಬಳಸಲಾಗುವ ಸಿಎಂಎಸ್01 ಉಪಗ್ರಹವನ್ನು ಹೊತ್ತ ಪಿಎಸ್ಎಲ್ ವಿ ಸಿ50 ರಾಕೆಟ್ ಅನ್ನು ಗುರುವಾರ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಿಎಂಎಸ್–01 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇದು ಪಿಎಸ್‌ಎಲ್‌ವಿ ಸರಣಿಯ 5ನೇ ಕಾರ್ಯಕ್ರಮವಾಗಿದ್ದು, ಸಿಎಂಎಸ್ 01 ಭಾರತದ 43ನೇ ಸಂವಹನ ಉಪಗ್ರಹವಾಗಿದೆ.

ಸಿಎಂಎಸ್‌ –01 ಸಂಪರ್ಕ ಸೇವೆಯ ಉಪಗ್ರಹವಾಗಿದ್ದು, ವಿಸ್ತರಿಸಲಾದ ಸಿ–ಬ್ಯಾಂಡ್‌ ತರಂಗಾಂತರದಲ್ಲಿ ಸೇವೆಯನ್ನು ಕಲ್ಪಿಸಲಿದೆ ಎಂದು ಇಸ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

SCROLL FOR NEXT