ದೇಶ

ಮೋದಿ ಸರ್ಕಾರ ಕ್ರೌರ್ಯದ ಎಲ್ಲಾ ಮಿತಿಗಳನ್ನು ಮೀರಿದೆ: ರಾಹುಲ್ ಗಾಂಧಿ

Shilpa D

ನವದೆಹಲಿ: ದೆಹಲಿಯ ಸಿಂಘು ಗಡಿಯಲ್ಲಿ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಸಿಖ್ ಧರ್ಮಗುರು ಸಾವಿನ ಘಟನೆ ಬಳಿಕ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮತ್ತು ಸಂಸದ ರಾಹುಲ್ ಗಾಂಧಿ ಕೂಡ ಮೋದಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಅನೇಕ ರೈತರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ , ಇದೇ ಸಮಯದಲ್ಲಿ, ಮೋದಿ ಸರ್ಕಾರವು ಕ್ರೌರ್ಯದ ಎಲ್ಲಾ ಮಿತಿಗಳನ್ನು ಮೀರಿದೆ. ಸರ್ಕಾರ ತನ್ನ ಪಟ್ಟು ಬಿಟ್ಟು ತಕ್ಷಣವೇ ಕೃಷಿ ವಿರೋಧಿ ಕಾನೂನನ್ನು ಹಿಂತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

65 ವರ್ಷದ ಸಿಖ್ ಸಂತ ಬಾಬಾ ರಾಮ್ ಸಿಂಗ್ ಸಹ ಆಂದೋಲನದಲ್ಲಿ ಭಾಗವಹಿಸಲು ಸಿಂಗ್ ಗಡಿಯನ್ನು ತಲುಪಿದರು. ಈ ಸಮಯದಲ್ಲಿ ಅವನು ಅಲ್ಲಿಯೇ ಗುಂಡು ಹಾರಿಸಿಕೊಂಡಿದ್ದಾರೆ. ಈ ವೇಳೆ ಜನರು ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು, ವೈದ್ಯರು ಅವನನ್ನು ಮೃತಪಟ್ಟಿರುವುದಾಗಿ ಎಂದು ಘೋಷಿಸಿದ್ದರು. 

'ದೆಹಲಿ ಗಡಿಯಲ್ಲಿ ರೈತರ ದುಃಸ್ಥಿತಿಯನ್ನು ನೋಡಿ ಕರ್ನಾಲ್‌ನ ಸಂತ ಬಾಬಾ ರಾಮ್ ಸಿಂಗ್ ಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ'' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. 

ಬಾಬಾ ರಾಮ್ ಸಿಂಗ್ ಅವರೊಂದಿಗೆ ಪಂಜಾಬಿ ಭಾಷೆಯಲ್ಲಿ ಆತ್ಮಹತ್ಯೆ ಪತ್ರ ಸಿಕ್ಕಿದೆ. ಈ ಪತ್ರದಲ್ಲಿ ಅವರು ರೈತರ ಸ್ಥಿತಿಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ರೈತರ ದುಃಖವನ್ನು ನಾನು ನೋಡಿದ್ದೇನೆ, ಅವರು ಅನೇಕ ದಿನಗಳಿಂದ ತಮ್ಮ ಹಕ್ಕಿಗಾಗಿ ಬೀದಿಗಿಳಿದಿದ್ದಾರೆ, ಆದರೂ ಸರ್ಕಾರ ಅವರಿಗೆ ನ್ಯಾಯ ನೀಡುತ್ತಿಲ್ಲ ಎಂದು ಬರೆದಿದ್ದಾರೆ.

ದೌರ್ಜನ್ಯ ಮತ್ತು ಕಿರುಕುಳ ಎರಡೂ ಪಾಪಗಳು. ರೈತರ ಹಕ್ಕುಗಳಿಗಾಗಿ ಯಾರೂ ಏನನ್ನೂ ಮಾಡಲಿಲ್ಲ, ಅನೇಕ ಜನರು ತಮ್ಮ ಪ್ರಶಸ್ತಿಗಳನ್ನು ರೈತರಿಗಾಗಿ ಹಿಂದಿರುಗಿಸಿದರು, ಇದು ದಬ್ಬಾಳಿಕೆಯ ವಿರುದ್ಧದ ಧ್ವನಿ ಎಂದು ಅವರು ಬರೆದಿದ್ದಾರೆ.

SCROLL FOR NEXT