ದೇಶ

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್: ಆದಿತ್ಯ ಆಳ್ವಾ ಜಾಮೀನು ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

Raghavendra Adiga

ನವದೆಹಲಿ: ಬಾಲಿವುಡ್ ನಟ ವಿವೇಕ್ ಒಬೆರಾಯ್ ಮನೆ ಮೇಲೆ ಬೆಂಗಳೂರು ಕೇಂದ್ರ ಅಪರಾಧ ಶಾಖೆ (ಸಿಸಿಬಿ) ದಾಳಿ ನಡೆಸಿದ ನಂತರ, ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದ ಆರೋಪಿ ಆದಿತ್ಯ ಆಳ್ವಾ ತನ್ನ ಬಂಧನಕ್ಕೆ ಮುನ್ನವೇ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. 

ಆದಿತ್ಯ ಆಳ್ವಾ ಅವರನ್ನು ಹುಡುಕಿಕೊಂಡು ಸಿಸಿಬಿ ತಂಡ ಮುಂಬೈನಲ್ಲಿರುವ ವಿವೇಕ್ ಒಬೆರಾಯ್ ನಿವಾಸಕ್ಕೆ ತೆರಳಿತ್ತು. ಈ ನಂತರ ಆಳ್ವಾ ಪೋಲೀಸರಿಂದ ತಪ್ಪಿಸಿಕೊಂಡಿದ್ದಲ್ಲದೆ ಬಂಧನಕ್ಕೆ ಮುನ್ನವೇ ಜಾಮೀನಿಗಾಗಿ ಸುರ್ಪೀಂ ಕೋರ್ಟ್ ಕದ ತಟ್ಟಿದ್ದರು.

ಈ ಸಂಬಂಧ ವಿಚಾರಣೆ ನಡೆಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್ ಆಳ್ವಾ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಬೇಕು ಎಂದು ಹೇಳಿದೆ. ವಾಸ್ತವವಾಗಿ, ಅಂತಹ ಪ್ರಕರಣಗಳಲ್ಲಿ ಸಮಯ ವ್ಯರ್ಥ ಮಾಡಲು ಸುಪ್ರೀಂ ಕೋರ್ಟ್ ಬಯಸುವುದಿಲ್ಲ ಎಂದೂ ನ್ಯಾಯಾಲಯ ಹೇಳಿದೆ.

ಸಿಸಿಬಿ ಹೊರಡಿಸಿದ ಹೇಳಿಕೆಯ ಪ್ರಕಾರ, ಕಾಟನ್ಪೇಟೆ ಪ್ರಕರಣದಲ್ಲಿ ಆದಿತ್ಯ ಅಳ್ವಾ ಪರಾರಿಯಾಗಿದ್ದಾನೆ. ಆತನ ಹುಡುಕಾಟ ನಡೆಯುತ್ತಿದೆ. ಈ ಸಂಬಂಧ, ಅವರ ಸಂಬಂಧಿಕರ ಮೇಲೂ ದಾಳಿ ನಡೆಸಲಾಗುತ್ತಿದೆ. ಆಳ್ವಾ ಅವರನ್ನು ಶೋಧಿಸುವ ಕಾರ್ಯದ ನಡುವೆ ಅವರು ವಿವೇಕ್ ಒಬೆರಾಯ್ ಮನೆಯಲ್ಲಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು.

ಹೈ-ಫೈ ಡ್ರಗ್ ಪ್ರಕರಣದಲ್ಲಿ ಅನೇಕ ದೊಡ್ಡವರ ಹೆಸರುಗಳು ಕಾಣಿಸಿಕೊಂಡಿವೆ. ಈ ಸಂಬಂಧ ಕೆಲ ಪೆಡ್ಲರ್ ಗಳನ್ನು ಸಹ ಬಂಧಿಸಲಾಗಿದೆ. ಈ ವೇಳೆ ಮಾಜಿ ಸಚಿವ ಜೀವರಾಜ್ ಆಳ್ವಾ ಅವರ ಪುತ್ರ ಆದಿತ್ಯ ಆಳ್ವಾ ಹೆಸರೂ ಸಹ ಪ್ರಕರಣದಲ್ಲಿ ತಳುಕು ಹಾಕಿಕೊಂಡಿತ್ತು. ಆ ಕಾರಣದಿಂದ ಆದುತ್ಯ ಅವರ ಸೋದರಿ ಆದಿತ್ಯ ಅವರ ಸಹೋದರಿ ಪ್ರಿಯಾಂಕಾ ಅಳ್ವಾ (ಬಾಲಿವುಡ್ ನಟ ವಿವೇಕ್ ಒಬೆರಾಯ್ ಪತ್ನಿ) ಮನೆ ಮೇಲೆ ಸಿಸಿಬಿ ದಾಳಿ ನಡೆಸಿತ್ತು.

SCROLL FOR NEXT