ದೇಶ

ಕಾಂಗ್ರೆಸ್ ನಾಯಕ ಮೋತಿಲಾಲ್ ವೋರಾ ನಿಧನ 

Srinivas Rao BV

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಮೋತಿಲಾಲ್ ವೋರಾ (93)ನವದೆಹಲಿಯಲ್ಲಿ ಡಿ.21 ರಂದು ಮೃತಪಟ್ಟಿದ್ದಾರೆ. 

ಕೋವಿಡ್-19 ಸೋಂಕಿಗೆ ತುತ್ತಾಗಿದ್ದ ಮೋತಿಲಾಲ್ ವೋರಾ ಅವರು ಕೋವಿಡ್-19 ನಿಂದ ಚೇತರಿಕೆ ಕಂಡಿದ್ದರು ಆದಾಗ್ಯೂ ಚೇತರಿಕೆ ನಂತರವೂ ಅವರಿಗೆ ಅನಾರೋಗ್ಯ ಬಾಧಿಸಿತ್ತು.

ಮೂತ್ರನಾಳ ಸೋಂಕು, ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ವೋರಾ ಅವರನ್ನು ಎಸ್ಕಾರ್ಟ್ಸ್ ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್ ನಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚತ್ತೀಸ್ ಗಢದಲ್ಲಿ ವೋರಾ ಅವರ ಅಂತ್ಯಕ್ರಿಯೆಗಳನ್ನು ನಡೆಸಲಾಗುತ್ತದೆ.

SCROLL FOR NEXT