ಕೊರೋನಾ ವೈರಸ್ 
ದೇಶ

ಹೊಸ ಕೊರೋನಾ ವೈರಾಣುವನ್ನು ಪತ್ತೆ ಮಾಡುವಲ್ಲಿ ಭಾರತ ಕೈತಪ್ಪಿರಬಹುದು: ತಜ್ಞರು

ಹೊಸ ಮಾದರಿಯ ಕೊರೋನಾ ವೈರಾಣುವನ್ನು ಪತ್ತೆ ಮಾಡುವುದರಲ್ಲಿ ಭಾರತ ಎಡವಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ನವದೆಹಲಿ: ಹೊಸ ಮಾದರಿಯ ಕೊರೋನಾ ವೈರಾಣುವನ್ನು ಪತ್ತೆ ಮಾಡುವುದರಲ್ಲಿ ಭಾರತ ಎಡವಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಬ್ರಿಟನ್ ನಲ್ಲಿ ಹೊಸ ಮಾದರಿಯ ವೈರಾಣು ಪತ್ತೆಯಾದ ಅವಧಿಯಲ್ಲಿ SARS-CoV-2 ಯ ಜೀನೋಮ್‌ಗಳನ್ನು ವಿಶ್ಲೇಷಿಸುವುದು ತುಲನಾತ್ಮಕವಾಗಿ ಕಡಿಮೆ ಇತ್ತು ಎಂದು ವೈರಾಣು ಸ್ವರೂಪಗಳನ್ನು ಅಧ್ಯಯನ ಮಾಡುತ್ತಿರುವ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಜಾಗತಿಕ ಮಟ್ಟದಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ಮೂಲಕ ಸಂಗ್ರಹಿಸಲಾಗಿರುವ ಸಾವಿರಾರು ಮಾದರಿಗಳ SARS-CoV-2 ನ್ನು 10 ಕ್ಲೇಡ್ ಗಳನ್ನಾಗಿ ವಿಭಾಗಿಸಲಾಗಿದೆ. ಆದರೆ ಭಾರತದಲ್ಲಿ 4,300 ಜಿನೋಮ್ ಗಳನ್ನು A1a, A2, A2a, A3, B, B1, B4 and I/A3i ಎಂಬ 8 ಕ್ಲೇಡ್ ಗಳಲ್ಲಿ ಪತ್ತೆ ಮಾಡಲಾಗಿದೆ. 

ಜಾಗತಿಕ ಮಟ್ಟದಲ್ಲಿ ಹಾಗೂ ಶೇ.70 ರಷ್ಟು ಭಾರತೀಯರಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದ ಕ್ಲೇಡ್ (ಮಾದರಿ) A2a ಆಗಿದ್ದು, I/A3i ಮಾದರಿ ಭಾರತಕ್ಕೆ ಹೊಸದಾಗಿದೆ. 

"ಭಾರತದಿಂದ 3-4 ತಿಂಗಳುಗಳಲ್ಲಿ ಕಳಿಸಲಾಗಿರುವ ಜಿನೋಮ್ ಗಳು ಕಡಿಮೆ ಇವೆ. ಹೊಸ ಮಾದರಿಯ ವಿಷಪೂರಿತ ವೈರಾಣು ಸೆಪ್ಟೆಂಬರ್ ನಲ್ಲಿ ಕಾಣಿಸಿಕೊಂಡಿದೆ. ಈ ಮಾದರಿಯ ವೈರಾಣು ಈಗಾಗಲೇ ಭಾರತದಲ್ಲಿ ಇರಬಹುದಾದ ಸಾಧ್ಯತೆ ಇದ್ದು, ಈ ವರೆಗೂ ಪತ್ತೆಯಾಗದೆಯೇ ಉಳಿದಿರುವ ಸಾಧ್ಯತೆ ಇದೆ" ಎಂದು ಭಾರತದಲ್ಲಿ ವೈರಾಣು ರೂಪಾಂತರವನ್ನು ಅಧ್ಯಯನ ಮಾಡುತ್ತಿರುವ ಹಿರಿಯ ವಿಜ್ಞಾನಿಗಳು ಹೇಳಿದ್ದಾರೆ. 

ಸಿಎಸ್ಐಆರ್- ಇನ್ಸ್ಟಿಟ್ಯೂಟ್ ಆಫ್ ಜಿನೋಮಿಕ್ಸ್- ಇಂಟಿಗ್ರೇಟೆಡ್ ಬಯೋಲಜಿ (ಐಜಿಐಬಿ) ಸಂಗ್ರಹಿಸಿದ್ದ 4,300 ಜಿನೋಮ್ ಗಳ ಪೈಕಿ ಬಹುಪಾಲು (4,000)  ಏಪ್ರಿಲ್-ಆಗಸ್ಟ್ ವರೆಗೂ ಸಂಗ್ರಹಿಸಲಾಗಿದೆ. ಸೆಪ್ಟೆಂಬರ್-ನವೆಂಬರ್ ಅವಧಿಯಲ್ಲಿ ಈ ಸಂಖ್ಯೆ 300 ಕ್ಕೆ ಕ್ಷೀಣಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal floods: ನೇಪಾಳ ಪ್ರವಾಹದ ಭೀಕರತೆ, 150 ಕಿ.ಮೀ ದೂರದ ಉತ್ತರ ಪ್ರದೇಶಕ್ಕೆ ಕೊಚ್ಚಿಕೊಂಡು ಬಂದ ಶವಗಳು!

Nepal Floods: ಭೀಕರ ಪ್ರವಾಹದಲ್ಲಿ 30 ದೇಶಗಳ ನಾಗರೀಕರು ನಾಪತ್ತೆ, ಅಮೆರಿಕದವರೇ ಅತಿ ಹೆಚ್ಚು!

ಭಾರತ-ಶ್ರೀಲಂಕಾ 2ನೇ ಟೆಸ್ಟ್ ಡ್ರಾದಲ್ಲಿ ಅಂತ್ಯ; WTC ಪಾಯಿಂಟ್ಸ್‌ ಟೇಬಲ್‌ನಲ್ಲಿ ಟೀಂ ಇಂಡಿಯಾಗೆ ಭಾರೀ ಹೊಡೆತ!

ಪಕ್ಷದ ಹಿತಕ್ಕಾಗಿ ನಾಗೇಂದ್ರ ಯಾವುದೇ ತ್ಯಾಗಕ್ಕೂ ಸಿದ್ಧ, ಆದ್ರೆ...: ಹೈಕಮಾಂಡ್ ಭೇಟಿ ಬಳಿಕ CM ಶಿವಕುಮಾರ್