ದೇಶ

ಎರಡನೇ ಹಂತದಲ್ಲಿ 60 ವರ್ಷ ಮೀರಿದವರಿಗೆ ಕೊರೋನಾ ಲಸಿಕೆ ವಿತರಣೆಗೆ ಕಾರ್ಯಯೋಜನೆ

Srinivasamurthy VN

ನವದೆಹಲಿ: ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಎರಡನೇ ಹಂತದಲ್ಲಿ 60 ವರ್ಷ ವಯೋಮಿತಿ ಮೀರಿದವರಿಗೆ ನೀಡಲು ಕಾರ್ಯಯೋಜನೆ ರೂಪಿಸಲಾಗಿದೆ.

ಮೊದಲ ಹಂತದಲ್ಲಿ 50 ವರ್ಷ ಮೀರಿದವರಿಗೆ ಎರಡನೇ ಹಂತದಲ್ಲಿ ಲಸಿಕೆ ನೀಡುತ್ತಿದ್ದು, ಅದರಲ್ಲಿ ಎರಡು ಭಾಗಗಳನ್ನಾಗಿ ವಿಂಗಡಿಸಲಾಗಿದೆ.. ಮೊದಲು 60 ವರ್ಷ ವಯಸ್ಸು ಮೀರಿದವರಿಗೆ ಲಸಿಕೆ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ಹೇಳಿವೆ.

ಲಸಿಕೆ ಲಭ್ಯತೆ ಆಧರಿಸಿ ಕೇಂದ್ರ ಸರ್ಕಾರ, ಹೆಚ್ಚಿನ ಗಂಡಾಂತರ ಎದುರಿಸುತ್ತಿರುವ ಆದ್ಯತೆಯ ಗುಂಪುಗಳಿಗೆ ನೀಡಲು ನಿರ್ಧರಿಸಿದೆ. ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಅಹೋರಾತ್ರಿ ಶ್ರಮಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆಯ ಗುಂಪಿನಲ್ಲಿ ಮೊದಲು ಲಸಿಕೆ ನೀಡಲು ಸರ್ಕಾರ  ಕಾರ್ಯೋನ್ಮುಖವಾಗಿದೆ.

2ನೇ ಆದ್ಯತೆಯ ಗುಂಪಿನಲ್ಲಿ 50 ವರ್ಷ ದಾಟಿದ ನಾಗರಿಕರಿಗೆ ಲಸಿಕೆ ನೀಡುವ ಉದ್ದೇಶ ಹೊಂದಲಾಗಿದೆ. 50 ವರ್ಷ ದಾಟಿದವರ ಗುಂಪನ್ನು 2 ವಿಭಾಗ ಮಾಡಿ, 60 ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮೊದಲು ಚಿಕಿತ್ಸೆ ನೀಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಸೂಕ್ತ ಕಾರ್ಯತಂತ್ರ ಯೋಜನೆ ರೂಪಿಸಲಾಗಿದೆ.

ದೇಶಾದ್ಯಂತ 30 ಸಾವಿರಕ್ಕೂ ಹೆಚ್ಚು ಸುಸಜ್ಜಿತ ಲಸಿಕೆ ಸಂಗ್ರಹ ಕೇಂದ್ರಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಪ್ರತಿಯೊಂದು ರಾಜ್ಯ ಮತ್ತು ಜಿಲ್ಲೆಗಳಲ್ಲಿ ಇದಕ್ಕಾಗಿಯೇ ಪ್ರತ್ಯೇಕ ಕಾರ್ಯಯೋಜನೆ ಮಾಡಲಾಗಿದೆ.
 

SCROLL FOR NEXT