ದೇಶ

ಮರಾಠರಿಗೆ ಇಡಬ್ಲ್ಯೂಎಸ್ ಮೀಸಲಾತಿಗೆ ಮಹಾರಾಷ್ಟ್ರ ಸರ್ಕಾರ ಅಸ್ತು

Lingaraj Badiger

ಮುಂಬೈ: ಮರಾಠರಿಗೆ ಶೈಕ್ಷಣಿಕ ಪ್ರವೇಶ ಮತ್ತು ಉದ್ಯೋಗಗಳಿಗಾಗಿ ಆರ್ಥಿಕ ದುರ್ಬಲ ವಿಭಾಗಗಳ(ಇಡಬ್ಲ್ಯೂಎಸ್) ಅಡಿಯಲ್ಲಿ ಮೀಸಲಾತಿ ನೀಡಲು ಮಹಾರಾಷ್ಟ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.

ಯಾವುದೇ ಸಾಮಾಜಿಕ ಮೀಸಲಾತಿಗೆ ಒಳಪಡದವರಿಗೆ ಶೇಕಡಾ 10ರಷ್ಟು ಇಡಬ್ಲ್ಯೂಎಸ್ ಕೋಟಾವನ್ನು ಮಹಾರಾಷ್ಟ್ರ ಸರ್ಕಾರ ನಿಗದಿಪಡಿಸಿದೆ.

ವಿಶೇಷವೆಂದರೆ, ಎಸ್‌ಇಬಿಸಿ (ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗ) ವರ್ಗದ ಅಡಿಯಲ್ಲಿ ಮರಾಠ ಸಮುದಾಯಕ್ಕೆ ನೀಡಲಾಗಿದ್ದ ಮೀಸಲಾತಿ ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಮುಂದಿನ ವರ್ಷ ಜನವರಿ 25ಕ್ಕೆ ವಿಚಾರಣೆ ನಡೆಯಲಿದೆ.

ಇದೇ ವೇಳೆ, ರಾಜ್ಯದ ಪ್ರಾಚೀನ ದೇವಾಲಯಗಳ ಸಂರಕ್ಷಣೆಯ ಯೋಜನೆಗೆ ರಾಜ್ಯ ಸಚಿವ ಸಂಪು
ಅನುಮೋದನೆಯನ್ನು ನೀಡಿದ್ದು, ರಾಜ್ಯ ಪಿಡಬ್ಲ್ಯುಡಿ ಇಲಾಖೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

SCROLL FOR NEXT