ದೇಶ

ಜಮ್ಮು-ಕಾಶ್ಮೀರ ಡಿಡಿಸಿ ಚುನಾವಣೆ: ಗುಪ್ಕರ್ ಮೈತ್ರಿಕೂಟಕ್ಕೆ 100 ಸ್ಥಾನ, 74 ಸ್ಥಾನ ಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ

Manjula VN

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಸಮಿತಿ (ಡಿಡಿಸಿ) ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ನ್ಯಾಷನಲ್ ಕ್ಯಾನ್ಫೆರೆನ್ಸ್ ನೇತೃತ್ವದ ಗುಪ್ಕರ್ ಮೈತ್ರೂಟ ಸ್ಪಷ್ಟ ಮೇಲುಗೈ ಸಾಧಿಸಿದೆ. ಒಟ್ಟು 276 ಡಿಡಿಸಿ ಸ್ಥಾನಗಳ ಪೈಕಿ ಗುಪ್ಕರ್ ಮೈತ್ರಿಕೂಟದ ಪಕ್ಷಗಳು 112 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. 

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದಲ್ಲಿ ವಿಶೇಷಾಧಿಕಾರ ನೀಡಿದ್ದ ಆರ್ಟಿಕಲ್ 370 ನ್ನು ರದ್ದುಗೊಳಿಸಿದ ಬೆನ್ನಲ್ಲೇ ಜನತಾ ಅಭಿಪ್ರಾಯ ಸಂಗ್ರಹಣೆ ಎಂದೇ ಡಿಡಿಸಿ ಚುನಾವಣೆಯನ್ನು ಪರಿಗಣಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಫಲಿತಾಂಶ ಮಹತ್ವ ಪಡೆದುಕೊಂಡಿತ್ತು. 

ಚುನಾವಣೆಯಲ್ಲಿ ಬಿಜೆಪಿ ಕೂಡ ಹಿಂದೆಬಿದ್ದಿಲ್ಲ. ಪಕ್ಷವಾರು ಲೆಕ್ಕಾಚಾರದಲ್ಲಿ ಬಿಜೆಪಿ ನಂಬರ್ 1 ಸ್ಥಾನದಲ್ಲಿಯೇ ಇದೆ. 276 ಸ್ಥಾನಗಳ ಪೈಕಿ ಬಿಜೆಪಿಯೊಂದೇ 74 ಸ್ಥಾನಗಳಲ್ಲಿ ಜಯಗಳಿಸಿದೆ. 

ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫೆರೆನ್ಸ್ ಪಕ್ಷ 67 ಸ್ಥಾನಗಳೊಂದಿಗೆ 2ನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ಗುಪ್ಕರ್ ಮೈತ್ರಿಕೂಟದ ಭಾಗವಾಗಿರುವ ಪಿಡಿಸಿ 27 ಸ್ಥಾನಗಳನ್ನು ಗೆದ್ದಿದೆ. 

ಸ್ವತಂತ್ರ ಅಭ್ಯರ್ಥಿಗಳು 49 ಸ್ಥಾನಗಳನ್ನು ಗೆದ್ದರೆ, ಮೆಹಬೂಬಾ ಮುಫ್ತಿಯ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ 27 ಸ್ಥಾನಗಳನ್ನು ಗಳಿಸಿದೆ.

ಕಾಂಗ್ರೆಸ್ ಇದುವರೆಗೆ 26 ಸ್ಥಾನಗಳನ್ನು ಗೆದ್ದಿದ್ದರೆ, ಜಮ್ಮು & ಕಾಶ್ಮೀರ ಅಪ್ನಿ ಪಕ್ಷಕ್ಕೆ 12ಸ್ಥಾನಗಳು ಸಿಕ್ಕಿವೆ. ಸಿಪಿಐ (ಎಂ) 6 ಸ್ಥಾನಗಳನ್ನು ಪಡೆದರೆ, ಜೆ & ಕೆ ಪೀಪಲ್ಸ್ ಕಾನ್ಫರೆನ್ಸ್ 5 ಸ್ಥಾನಗಳನ್ನು ಪಡೆದುಕೊಂಡಿದೆ. ಜೆಕೆಪಿಎಂಗೆ 3 ಸ್ಥಾನಗಳು ಮತ್ತು 2 ಸ್ಥಾನಗಳನ್ನು ಜೆ & ಕೆ ನ್ಯಾಷನಲ್ ಪ್ಯಾಂಥರ್ಸ್ ಪಕ್ಷ ಗೆದ್ದಿದೆ. ಪಿಡಿಎಫ್ ಮತ್ತು ಬಹುಜನ ಸಮಾಜವಾದಿ ಪಕ್ಷಕ್ಕೆ (ಬಿಎಸ್‌ಪಿ) ತಲಾ ಒಂದು ಸ್ಥಾನ ಸಿಕ್ಕಿದೆ.

ಜಮ್ಮು ವಿಭಾಗದ ಜಮ್ಮು, ಉಧಂಪುರ್, ಕಥುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ ಬಿಜೆಪಿ ಮುನ್ನಡೆಸಿ ಸಾಧಿಸಿದೆ. ಬಿಜೆಪಿ ಜಮ್ಮು ಮತ್ತು ಉಧಂಪುರ್ ಜಿಲ್ಲೆಗಳಲ್ಲಿ ತಲಾ 11, ಕಥುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ ತಲಾ 13 ಸ್ಥಾನಗಳನ್ನು ಗೆದ್ದಿದೆ. ರಿಯಾಸಿಯಲ್ಲಿ ಬಿಜೆಪಿ 7 ಸ್ಥಾನಗಳನ್ನು, ದೋಡಾದಲ್ಲಿ 8 ಸ್ಥಾನಗಳನ್ನು ಗಳಿಸಿತು. ಸ್ವತಂತ್ರರು 8 ಸ್ಥಾನಗಳಲ್ಲಿ ಬಹುಮತ ಪಡೆದ ಏಕೈಕ ಜಿಲ್ಲೆ ಪೂಂಚ್. ರಜೌರಿ ಮತ್ತು ರಾಂಬನ್ ಜಿಲ್ಲೆಗಳಿಂದ ಬಿಜೆಪಿಗೆ ತಲಾ ಮೂರು ಸ್ಥಾನಗಳು ದೊರೆತಿವೆ.

SCROLL FOR NEXT