ದೇಶ

ಮಾಜಿ ಪ್ರಧಾನ ಮಂತ್ರಿ ದಿ.ಅಟಲ್ ಬಿಹಾರಿ ವಾಜಪೇಯಿ 96ನೇ ಜಯಂತಿ: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಸ್ಮರಣೆ

Sumana Upadhyaya

ನವದೆಹಲಿ: ಇಂದು ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ. ಅವರ ಜನ್ಮದಿನವನ್ನು ಉತ್ತಮ ಆಡಳಿತ ದಿನವೆಂದು ಆಚರಿಸಲಾಗುತ್ತಿದೆ. 

ದೆಹಲಿಯಲ್ಲಿರುವ ಅಟಲ್ ಸಮಾದಿ ಸದೈವ್ ಅಟಲ್ ಬಳಿ ಬೆಳಗ್ಗೆಯೇ ತೆರಳಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪುಷ್ಪವಿರಿಸಿ ಗೌರವ ನಮನ ಸಲ್ಲಿಸಿದರು.

ಸದೈವ್ ಅಟಲ್ ಗೆ ತೆರಳಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಮತ್ತು ಪಿಯೂಷ್ ಗೋಯಲ್ ಅಗಲಿದ ನಾಯಕನನ್ನು ಸ್ಮರಿಸಿ ಗೌರವ ನಮನ ಸಲ್ಲಿಸಿದರು.

ಪ್ರಧಾನ ಮಂತ್ರಿ ತಮ್ಮ ಸಂದೇಶದಲ್ಲಿ, ಅಟಲ್ ಬಿಹಾರಿ ವಾಜಪೇಯಿಯವರ 96ನೇ ಜಯಂತಿ ಸಂದರ್ಭದಲ್ಲಿ ಅವರಿಗೆ ಗೌರವ ನಮನಗಳು. ಅಟಲ್ ಜೀಯವರು ದೇಶವನ್ನು ಅಭೂತಪೂರ್ವ ಯಶಸ್ಸಿನೆಡೆಗೆ ಕೊಂಡೊಯ್ದಿದ್ದರು. ಬಲಿಷ್ಠ ಮತ್ತು ಸಂಪದ್ಭರಿತ ದೇಶವನ್ನು ಕಟ್ಟುವಲ್ಲಿನ ಅವರ ಪ್ರಯತ್ನವನ್ನು ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ಇಂದು ಪ್ರಧಾನ ಮಂತ್ರಿಗಳು ವಾಜಪೇಯಿ ಅವರ ಕುರಿತ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ನಂತರ ಕಿಸಾನ್ ಸಮ್ಮಾನ್ ನಿಧಿ-ಪಿಎಂ ಕಿಸಾನ್ ಅಡಿಯಲ್ಲಿ ಆರ್ಥಿಕ ನೆರವಿನ ಕಂತನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಲಿದ್ದಾರೆ.

ಅಟಲ್ ಜೀಯವರ ಜನ್ಮದಿನದ ಪ್ರಯುಕ್ತ ಬಿಜೆಪಿ ನಾಯಕರು ಅವರನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ರಾಜ್ಯ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಆರೋಗ್ಯ ಮತ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

SCROLL FOR NEXT