ದೇಶ

ಅಟಲ್‌ ಸುರಂಗದಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿ ನೃತ್ಯ: 10 ಪ್ರವಾಸಿಗರ ಬಂಧನ

Srinivasamurthy VN

ಶಿಮ್ಲಾ: ಇತ್ತೀಚೆಗಷ್ಟೇ ಉದ್ಘಾಟನೆಯಾಗಿದ್ದ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗ ಅಟಲ್‌ ಟನಲ್ ನೊಳಗೆ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದ ಕಾರಣಕ್ಕಾಗಿ, ಹಿಮಾಚಲ ಪ್ರದೇಶ ಪೊಲೀಸರು 10 ಪ್ರವಾಸಿಗರನ್ನು ಬಂಧಿಸಿ, ಮೂರು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಗುರುವಾರ ಸುರಂಗದೊಳಗೆ ವಾಹನ ನಿಲ್ಲಿಸಿ, ಹಾಡು ಹಾಕಿ ನೃತ್ಯ ಮಾಡಿದ್ದರು. ಇದರಿಂದಾಗಿ ಟ್ರಾಫಿಕ್‌ ಸಮಸ್ಯೆ ಉಂಟಾಗಿತ್ತು. ಪ್ರವಾಸಿಗರೆಲ್ಲರೂ ದೆಹಲಿಯವರಾಗಿದ್ದು, 20–30 ವಯಸ್ಸಿನವರಾಗಿದ್ದಾರೆ. ಕೊರೋನವೈರಸ್ ಸಾಂಕ್ರಾಮಿಕದ ದೃಷ್ಟಿಯಿಂದ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 188  ಮತ್ತು 270ರಡಿಯಲ್ಲಿ ಬಂಧಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಂದು ಕುಲು ಎಸ್‌.ಪಿ ಗೌರವ್‌ ಸಿಂಗ್‌ ಹೇಳಿದರು. 

ಉದ್ಘಾಟನೆಗೊಂಡ ಬಳಿಕ, ಪ್ರವಾಸಿ ತಾಣವಾಗಿರುವ ಈ ಸುರಂಗ ಮಾರ್ಗವು ನಿತ್ಯ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿದೆ. ವಿಶ್ವದ ಅತಿ ಉದ್ದದ ಸುರಂಗ ಮಾರ್ಗ ಎಂಬ ಕೀರ್ತಿಗೆ ಪಾತ್ರವಾಗಿರುವ ಅಟಲ್ ಟನಲ್ 10,040 ಅಡಿ ಉದ್ಧವಿದೆ. ಈ ಅಟಲ್ ಟನಲ್ 13,058 ಅಡಿ ಎತ್ತರದ ರೋಹ್ಟಾಂಗ್  ಪಾಸ್‌ನ ಕೆಳಗಿರುವ 9.02 ಕಿ.ಮೀ ಅಂಡರ್‌ಪಾಸ್ ಲಾಹೌಲ್-ಸ್ಪಿಟಿ ಜಿಲ್ಲೆಯ ಲಾಹೌಲ್ ಮತ್ತು ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಮನಾಲಿಯನ್ನು ಸಂಪರ್ಕಿಸುತ್ತದೆ.
 

SCROLL FOR NEXT