ದೇಶ

ಜಾರ್ಖಾಂಡ್: 5 ನಕ್ಸಲರ ಬಂಧನ, ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಸ್ಫೋಟಕ ವಸ್ತುಗಳು ವಶಕ್ಕೆ

Manjula VN

ಗುಮ್ಲಾ: ಜಾರ್ಖಾಂಡ್'ನ ಗುಮ್ಲಾ ಜಿಲ್ಲೆಯಲ್ಲಿ ಐವರು ನಕ್ಸಲರನ್ನು ಬಂಧನಕ್ಕೊಳಪಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ಬಂಧಿತ ಐವರು ನಕ್ಸಲರು ತೃತೀಯ ಪ್ರಸ್ತುತಿ ಸಮಿತಿಗೆ ಸೇರಿದವರಾಗಿದ್ದಾರೆ. ಬಂಧಿತರಿಂದ ಜೀವಂತ ಗುಂಡುಗಳು, ರೈಫಲ್ ಹಾಗೂ ಪಿಸ್ತೂಲುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಗುಮ್ಲಾ ಎಸ್'ಪಿ ಜನಾರ್ಧನನ್ ಅವರು ಹೇಳಿದ್ದಾರೆ. 

ಬಂಧಿತ ಉಗ್ರರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಮಾಹಿತಿಗಳು ಬಂದಿವೆ. ಕಾರ್ಯಾಚರಣೆ ವೇಳೆ ಮತ್ತಷ್ಟು ನಕ್ಸಲರು ತಪ್ಪಿಸಿಕೊಂಡಿದ್ದಾರೆಂಬ ಮಾಹಿತಿಗಳಿವೆ ಎಂದಿದ್ದಾರೆ. 

SCROLL FOR NEXT