ದೇಶ

ಜಮ್ಮು-ಕಾಶ್ಮೀರ: ದೇವಾಲಯದ ಮೇಲೆ ನಡೆಯಬಹುದಾಗಿದ್ದ ಉಗ್ರ ದಾಳಿ ವಿಫಲಗೊಳಿಸಿದ ಭದ್ರತಾಪಡೆಗಳು 

Srinivas Rao BV

ಪೂಂಚ್: ಜಮ್ಮು-ಕಾಶ್ಮೀರದಲ್ಲಿ ದೇವಾಲಯದ ಮೇಲೆ ನಡೆಯಬಹುದಾಗಿದ್ದ ಉಗ್ರ ದಾಳಿಯನ್ನು ಭದ್ರತಾ ಸಿಬ್ಬಂದಿಗಳು ವಿಫಲಗೊಳಿಸಿದ್ದಾರೆ. 

ಪೂಂಚ್ ನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಶಂಕಿತರನ್ನು ಬಂಧಿಸಲಾಗಿದ್ದು, ಆರು ಗ್ರೆನೇಡ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 

ಎಸ್ಎಸ್ ಪಿ ರಮೇಶ್ ಕುಮಾರ್ ಅಂಗ್ರಾಲ್ ಈ ಬಗ್ಗೆ ಮಾಹಿತಿ ನೀಡಿದ್ದು ವಿಶೇಷ ಕಾರ್ಯಪಡೆ ತಂಡ 49 ರಾಷ್ಟ್ರೀಯ ರೈಫಲ್ಸ್ ನಡೆಸುತ್ತಿದ್ದ ಕಾರ್ಯಾಚರಣೆ ವೇಳೆ ಮುಸ್ತಾಫಾ ಇಕ್ಬಾಲ್ ಹಾಗೂ ಮುರ್ತಾಜಾ ಇಕ್ಬಾಲ್ ಎಂಬುವವರನ್ನು ಬಂಧಿಸಿದ್ದು, ಮುಸ್ತಾಫಾನಿಗೆ ಪಾಕಿಸ್ತಾನದಿಂದ ಕರೆ ಬಂದಿತ್ತು ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. 

ಈ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಅವರಿಗೆ ಅರಿ ಗ್ರಾಮದಲ್ಲಿರುವ ದೇವಾಲಯದ ಮೇಲೆ ಬಾಂಬ್ ದಾಳಿ ನಡೆಸುವ ಟಾರ್ಗೆಟ್ ನೀಡಲಾಗಿತ್ತು ಎಂಬುದನ್ನು ಒಪ್ಪಿಕೊಂಡಿದ್ದು ಗ್ರೆನೇಡ್ ನ್ನು ಹೇಗೆ ಬಳಕೆ ಮಾಡಬೇಕೆಂಬುದರ ಬಗ್ಗೆ ಮಾಹಿತಿಯನ್ನೊಳಗೊಂಡ ವಿಡಿಯೋವನ್ನೂ ಫೋನ್ ಗೆ ಕಳಿಸಲಾಗಿತ್ತು ಎಂಬ ಮಾಹಿತಿ ಬಹಿರಂಗಪಡಿಸಿದ್ದಾರೆ. ಆರೋಪಿಗಳ ಹೇಳಿಕೆಯ ಆಧಾರದಲ್ಲಿ ನಡೆಸಿದ ತಪಾಸಣೆ ನಡೆಸಿದಾಗ 6 ಗ್ರೆನೇಡ್ ಗಳನ್ನು ವಶಕ್ಕೆ ಪಡೆಯಲಾಗಿದೆ.

SCROLL FOR NEXT