ಅಯ್ಯಪ್ಪ ಸ್ವಾಮಿ ದೇವಸ್ಥಾನ 
ದೇಶ

ಕೊರೋನಾ ಹಿನ್ನೆಲೆ: ಶಬರಿಮಲೆಯಲ್ಲಿ ಆದಾಯ ಸಂಗ್ರಹ 9.09 ಕೋಟಿ ರೂ.ಗೆ ಕುಸಿತ

ಕೋವಿಡ್ -19 ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ  ನಿರ್ಬಂಧಗಳಿಂದಾಗಿ ತೀರ್ಥಕ್ಷೇತ್ರವಾದ ಶಬರಿಮಲೆಯ ಅಯ್ಯಪ್ಪ ದೇವಸ್ಥಾನದ ಆದಾಯ ಕುಸಿದಿದೆ.

ಕೊಟ್ಟಾಯಂ: ಕೋವಿಡ್ -19 ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ  ನಿರ್ಬಂಧಗಳಿಂದಾಗಿ ತೀರ್ಥಕ್ಷೇತ್ರವಾದ ಶಬರಿಮಲೆಯ ಅಯ್ಯಪ್ಪ ದೇವಸ್ಥಾನದ ಆದಾಯ ಕುಸಿದಿದೆ.

ಮಂಡಲ ಪೂಜೆಯ ಮೊದಲ 39 ದಿನಗಳಲ್ಲಿ ಅರಾವಣ ಮಾರಾಟ ಮತ್ತು ಹುಂಡಿ ಸಂಗ್ರಹದಿಂದ ಬಂದ ಆದಾಯ ಸೇರಿದಂತೆ ದೇವಾಲಯದ ಒಟ್ಟು ಆದಾಯ 9.09 ಕೋಟಿ ರೂ ನಷ್ಟಿದೆ. ಆದರೆ, ಕಳೆದ ವರ್ಷದ ಮಂಡಲ ಪೂಜೆ ಅವಧಿಯಲ್ಲಿ ಒಟ್ಟು 165 ಕೋಟಿ ರೂ ಆದಾಯ ಸಂಗ್ರಹವಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕೋವಿಡ್ -19 ತಡೆ ಕ್ರಮದಿಂದಾಗಿ ಈ ವರ್ಷ ಡಿ 24 ರವರೆಗೆ 71,706 ಭಕ್ತರಿಗೆ ಮಾತ್ರ ದೇವಾಲಯಕ್ಕೆ ಭೇಟಿ ನೀಡಲು ಅವಕಾಶವಿತ್ತು. 2019 ರಲ್ಲಿ ದಿನಕ್ಕೆ 5000 ದಿಂದ ಒಂದು ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು.

ದೇವಾಲಯವನ್ನು ನಿರ್ವಹಿಸುವ ತಿರುವಂಕೂರು ದೇವಸ್ವಂ ಮಂಡಳಿಯು ತನ್ನ ಅಧೀನದಲ್ಲಿರುವ ಎಲ್ಲಾ 1250 ದೇವಾಲಯಗಳಿಗೆ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಭಕ್ತರ ಪ್ರವೇಶವನ್ನು ನಿರ್ಬಂಧಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT