ದೇಶ

ರೈತರ ಪ್ರತಿಭಟನೆ: ಪಂಜಾಬ್ ನಲ್ಲಿ 1,500 ಕ್ಕೂ ಹೆಚ್ಚು ಟೆಲಿಕಾಂ ಟವರ್ ಗಳಿಗೆ ಹಾನಿ 

Srinivas Rao BV

ಪಂಜಾಬ್: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳಿಂದ ಅಂಬಾನಿ-ಅದಾನಿಯಂತಹ ಉದ್ಯಮಿಗಳಿಗೆ ಲಾಭದಾಯಕ ಎಂದು ಕಾಯ್ದೆಯನ್ನು ವಿರೋಧಿಸಿತ್ತಿರುವ ಅನೇಕರು ವದಂತಿ ಹಬ್ಬಿಸಿದ್ದರು. ಈಗ ಪಂಜಾಬ್ ನಲ್ಲಿರುವ ರೈತ ಸಮುದಾಯದ ಬಹುತೇಕ ಮಂದಿ ಇದನ್ನೇ ನಿಜವೆಂದು ಭಾವಿಸಿ ತಮ್ಮ ಆಕ್ರೋಶವನ್ನು ಅಂಬಾನಿ ನೇತೃತ್ವದ ಜಿಯೋ ಮೊಬೈಲ್ ಟವರ್ ಗಳ ಮೇಲೆ ತಿರುಗಿಸಿದ್ದಾರೆ. ಪರಿಣಾಮ ಈವರೆಗೂ 1,500 ಟೆಲಿಕಾಂ ಟವರ್ ಗಳು ಹಾನಿಗೊಳಗಾಗಿದೆ. 

ಟವರ್-ಇನ್ಫ್ರಾಸ್ಟ್ರಕ್ಚರ್ ಪ್ರೊವೈಡರ್ ಅಸೋಸಿಯೇಷನ್ (ಟಿಎಐಪಿಎ) ಪ್ರಕಾರ ರಾಜ್ಯದಲ್ಲಿ ಕನಿಷ್ಠ 1,600 ಟವರ್ ಗಳಿಗೆ ಹಾನಿಯಾಗಿದೆ.  

ರೈತರು ತಮ್ಮ ಆಕ್ರೋಶವನ್ನು ಜಿಯೋ ಸಂಸ್ಥೆಯ ಮೇಲೆ ತೋರುತ್ತಿದ್ದು, ಕೆಲೆವಡೆಗೆ ಟವರ್ ಗಳಿಗೆ ಅಗತ್ಯವಿರುವ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದ್ದಾರೆ ಇನ್ನೂ ಕೆಲವೆಡೆ ಹಾನಿಗೊಳಪಡಿಸುತ್ತಿದ್ದಾರೆ. ಮತ್ತೆ ಕೆಲವೆಡೆ ಜಿಯೋ ಫೈಬರ್ ಕೇಬಲ್ ಗಳನ್ನು ಕಡಿತಗೊಳಿಸುತ್ತಿದ್ದಾರೆ. 

ಮತ್ತೊಂದು ವಿಲಕ್ಷಣ ಪ್ರಕರಣದಲ್ಲಿ ಟವರ್ ಬಳಿ ಇದ್ದ ಜನರೇಟರ್ ನ್ನು ಕೊಂಡೊಯ್ದು ಸ್ಥಳೀಯ ಗುರುದ್ವಾರಕ್ಕೆ ನೀಡಲಾಗಿತ್ತು. ಅಷ್ಟೇ ಅಲ್ಲದೇ ಅನೇಕ ಮಂದಿ ಜಿಯೋ ನೌಕರರಿಗೆ ಬೆದರಿಕೆ ಹಾಕಲಾಗಿದ್ದರ ವಿಡಿಯೋ ಸಹ ವೈರಲ್ ಆಗತೊಡಗಿತ್ತು. ಇದರಿಂದ ಮೊಬೈಲ್ ನೆಟ್ವರ್ಕ್ ಪೂರೈಕೆದಾರ ಸಂಸ್ಥೆಗಳು ಸಮಸ್ಯೆ ಎದುರಿಸುತ್ತಿವೆ. 

ರೈತರು ಟವರ್ ಗಳಿಗೆ ಹಾನಿಮಾಡಿದ್ದರೂ ಸಹ ಯಾವುದೇ ಎಫ್ಐಆರ್, ಪ್ರಕರಣ ದಾಖಲಾಗಿಲ್ಲ. ಟವರ್ ಗಳಿಗೆ ಹಾನಿ ಮಾಡುತ್ತಿರುವ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಅಮರಿಂದರ್ ಸಿಂಗ್, ರೈತರಿಗೆ ಶಾಂತಿಯುತ ಪ್ರತಿಭಟನೆ ನಡೆಸುವಂತೆ ಕರೆ ನೀಡಿದ್ದರು. 

SCROLL FOR NEXT