ದೇಶ

ಬ್ರಿಟನ್ ವಿಮಾನಗಳಿಗೆ ನಿರ್ಬಂಧ ಮುಂದುವರೆಸುವ ಸಾಧ್ಯತೆ ಇದೆ: ಕೇಂದ್ರ ಸಚಿವ

Srinivas Rao BV

ನವದೆಹಲಿ: ಭಾರತ-ಬ್ರಿಟನ್ ನಡುವಿನ ಪ್ರಯಾಣಿಕ ವಿಮಾನಗಳಿಗೆ ವಿಧಿಸಲಾಗಿರುವ ನಿರ್ಬಂಧವನ್ನು ಮುಂದುವರೆಸುವ ಸುಳಿವನ್ನು ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ನೀಡಿದ್ದಾರೆ. 

ಬ್ರಿಟನ್ ನಿಂದ ಹರಡುತ್ತಿರುವ ರೂಪಾಂತರಿ ವೈರಾಣು ಹರಡುವಿಕೆಯನ್ನು ತಡೆಗಟ್ಟಲು ಭಾರತ ಬ್ರಿಟನ್ ನಿಂದ ಬರುವ ಹಾಗೂ ಬ್ರಿಟನ್ ಗೆ ತೆರಳುವ ವಿಮಾನಗಳಿಗೆ ನಿರ್ಬಂಧ ವಿಧಿಸಿತ್ತು. ಈಗ ಡಿ.29 ರಂದು ಭಾರತದಲ್ಲಿ ಬ್ರಿಟನ್ ನಿಂದ ಆಗಮಿಸಿದವರ ಪೈಕಿ 6 ಮಂದಿಯಲ್ಲಿ ರೂಪಾಂತರಗೊಂಡ ಕೊರೋನಾ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಡಿ.31 ವರೆಗೆ ವಿಮಾನಗಳಿಗೆ ವಿಧಿಸಲಾಗಿರುವ ನಿರ್ಬಂಧ ಮುಂದುವರೆಸುವ ಸಾಧ್ಯತೆಗಳಿವೆ.

ಭಾರತ-ಬ್ರಿಟನ್ ನಡುವಿನ ವಿಮಾನಗಳಿಗೆ ವಿಧಿಸಲಾಗಿರುವ ನಿರ್ಬಂಧ ಸಣ್ಣ ಪ್ರಮಾಣದಲ್ಲಿ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದು ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹರ್ದೀಪ್ ಸಿಂಗ್ ತಿಳಿಸಿದ್ದು, ಹೆಚ್ಚುವರಿ ಕ್ರಮಗಳನ್ನು ಕೈಗೊಂಡರೆ ಇನ್ನೆರಡು ದಿನಗಳಲ್ಲಿ ತಿಳಿಸಲಾಗುವುದು ಎಂದಿದ್ದಾರೆ. 

ಬ್ರಿಟನ್ ನಲ್ಲಿ ಪತ್ತೆಯಾಗಿರುವ ರೂಪಾಂತರಿ ವೈರಾಣು ಡೆನ್ಮಾರ್ಕ್, ನೆದರ್ಲ್ಯಾಂಡ್, ಆಸ್ಟ್ರೇಲಿಯಾ, ಇಟಾಲಿ, ಸ್ವೀಡನ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕಂಡುಬಂದಿದೆ. 

SCROLL FOR NEXT