ದೇಶ

ರಾಮ ಮಂದಿರದ ಅಡಿಪಾಯಕ್ಕೆ ಗುರುತಿಸಲಾದ ಪ್ರದೇಶದ ಅಡಿಯಲ್ಲಿ ಸರಯೂ ನದಿ ತೊರೆ: ಐಐಟಿ ಸಹಾಯ ಕೋರಿದ ಟ್ರಸ್ಟ್ 

Srinivas Rao BV

ಅಯೋಧ್ಯೆ: ರಾಮ ಮಂದಿರ ನಿರ್ಮಾಣಕ್ಕಾಗಿ ಅಡಿಪಾಯ ಹಾಕುವುದಕ್ಕೆ ಗುರುತಿಸಲಾಗಿರುವ ಪ್ರದೇಶದ ಕೆಳಭಾಗದಲ್ಲಿ ಸರಯೂ ನದಿ ತೊರೆ ಇದ್ದು, ಯೋಜನಾ ಸಾಧ್ಯತೆಗೆ ಅಡ್ಡಿ ಉಂಟಾಗಿದೆ. 

ಈ ಅಡ್ಡಿಯ ಹೊರತಾಗಿಯೂ ದೇವಾಲಯ ನಿರ್ಮಿಸುವುದಕ್ಕಾಗಿ ಪ್ರಸ್ತಾವಿತ ಅಡಿಪಾಯಕ್ಕೆ ಬೇರೆ  ಉತ್ತಮ ಮಾದರಿಯ ಹಾಗೂ ಯೋಜನೆಯನ್ನು ನೀಡುವಂತೆ ರಾಮ ಮಂದಿರ ಟ್ರಸ್ಟ್ ಐಐಟಿ ಸಹಾಯ ಕೇಳಿದೆ. 

ದೇವಾಲಯ ನಿರ್ಮಾಣದ ಸಮಿತಿಯ ಅಧ್ಯಕ್ಷರಾಗಿರುವ ನೃಪೇಂದ್ರ ಮಿಶ್ರಾ ಈ ಸಂಬಂಧ ಸಭೆ ನಡೆಸಿದ್ದಾರೆ. ದೇವಾಲಯ ನಿರ್ಮಾಣಕ್ಕಾಗಿ ಈಗ ಸಿದ್ಧವಾಗಿರುವ ಅಡಿಪಾಯದ ಮಾದರಿ ಕಾರ್ಯಸಾಧುವಲ್ಲ ಎಂಬುದು ಸಭೆಯಲ್ಲಿ ಸ್ಪಷ್ಟವಾಗಿದ್ದು ಬಲಿಷ್ಠ ಅಡಿಪಾಯಕ್ಕಾಗಿ ಬೇರೆಯ ಮಾದರಿಯನ್ನು ಸೂಚಿಸುವಂತೆ ಐಐಟಿಗಳಿಗೆ ಮನವಿ ಮಾಡಲಾಗಿದೆ. 

ರಾಮ ಮಂದಿರವನ್ನು 2023 ಕ್ಕೆ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ. ಈಗ ನದಿ ತೊರೆ ಎದುರಾಗಿರುವುದರಿಂದ ದೇವಾಲಯದ ನಿರ್ಮಾಣ ಸಮಿತಿ ಮುಂದೆ ಎರಡು ಆಯ್ಕೆಗಳಿವೆ. ಕಲ್ಲುಗಳಿಗೆ ಆಧಾರವಾಗಿರುವ ರಾಫ್ಟ್ ಗಳಿಗೆ ವೈಬ್ರೋ ಸ್ಟೋನ್ ಕಾಲಮ್ ಗಳನ್ನು ಬಳಕೆ ಮಾಡುವುದು ಅಥವಾ, ಇಂಜಿನಿಯರಿಂಗ್ ಮಿಶ್ರಣವನ್ನು ಬಳಸಿ ಗುಣಾಮಟ್ಟ ಹಾಗೂ ಮಣ್ಣಿನ ಹಿಡಿತವನ್ನು ಹೆಚ್ಚಿಸುವ ಆಯ್ಕೆಗಳನ್ನು ಪರಿಗಣಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

SCROLL FOR NEXT