ದೇಶ

ಶ್ರೀರಾಮ್ ವೆಂಕಟರಾಮನ್ ಪ್ರಕರಣ: ಚಾರ್ಜ್ ಶೀಟ್ ನಲ್ಲಿ ಐಎಎಸ್ ಅಧಿಕಾರಿ ಮೊದಲ ಆರೋಪಿ

Nagaraja AB

ತಿರುವನಂತಪುರಂ: ಐಎಎಸ್ ಅಧಿಕಾರಿ ಶ್ರೀರಾಮ್ ವೆಂಕಟರಾಮನ್  ವೇಗವಾಗಿ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಪತ್ರಕರ್ತ ಕೆಎಂ ಬಷೀರ್  ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಆರು ತಿಂಗಳ ಬಳಿಕ  ನ್ಯಾಯಾಲಯದಲ್ಲಿ ಚಾರ್ಚ್ ಶೀಟ್ ಸಲ್ಲಿಸಿದ್ದು, ಐಎಎಸ್ ಅಧಿಕಾರಿಯನ್ನು ಮೊದಲ ಆರೋಪಿಯನ್ನಾಗಿಸಲಾಗಿದೆ.

ಐಎಎಸ್ ಅಧಿಕಾರಿ ಕುಡಿದು ಕಾರು ಚಾಲನೆ ಮಾಡಿದ್ದಾರೆ ಎಂಬುದು ಚಾರ್ಚ್ ಶೀಟ್ ನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಮಾಲೀಕ ಮತ್ತು ಸಹ-ಚಾಲಕ ವಾಫಾ ಫಿರೋಜ್ ಅವರನ್ನು ಎರಡನೇ ಆರೋಪಿ ಎಂದು ಹೆಸರಿಸಲಾಗಿದೆ ಮತ್ತು ಅಪರಾಧದ ಪ್ರಚೋದನೆಯ ಆರೋಪವಿದೆ.

ಪ್ರಸ್ತುತ ವೆಂಕಟರಾಮನ್ ಅವರನ್ನು ಅಮಾನತು ಮಾಡಲಾಗಿದೆ. ಕಳೆದ ವಾರ, ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯು ಪೊಲೀಸರು ಈವರೆಗೆ ಚಾರ್ಜ್‌ಶೀಟ್ ಸಲ್ಲಿಸಲು ವಿಫಲವಾದ ಕಾರಣ ಅವರನ್ನು ಮತ್ತೆ ಸೇವೆಯಲ್ಲಿ ಸೇರಿಸಬೇಕೆಂದು ಶಿಫಾರಸು ಮಾಡಿದ್ದರು. ಆದರೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಶಿಫಾರಸನ್ನು ತಿರಸ್ಕರಿಸಿದ್ದು, ಅಮಾನತು ವಿಸ್ತರಿಸುವಂತೆ ಆದೇಶಿಸಿದ್ದರು.

84 ದಾಖಲೆಗಳು, 100 ಪ್ರತ್ಯೇಕ್ಷದರ್ಶಿಗಳ ಹೇಳಿಕೆಗಳ ಜೊತೆಗೆ  66  ಪುಟಗಳ ಜಾರ್ಜ್ ಶೀಟ್ ನ್ನು ತಿರುವನಂತಪುರಂನ ಮೂರನೇ ಮುಖ್ಯ ಜ್ಯೂಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ   ಸಲ್ಲಿಸಲಾಗಿದ್ದು, ಸೆಕ್ಷನ್ 304, 201 ಮತ್ತು ಎಂವಿ ಆಕ್ಟ್ ಸೆಕ್ಷನ್ 184, 185 ಮತ್ತು 188 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

SCROLL FOR NEXT