ದೇಶ

ಕೊರೋನಾವೈರಸ್ ಗೆ ಸಡ್ಡು: ಚೀನಿ ಯುವತಿಯ ವರಿಸಿದ ಭಾರತದ ಹುಡುಗ!

Srinivasamurthy VN

ನವದೆಹಲಿ: ಕೊರೋನಾವೈರಸ್ ಕಾಲಘಟ್ಟದಲ್ಲೂ ಭಾರತದ ಹುಡುಗ,  ಚೀನಿ ಹುಡುಗಿಯನ್ನು ಕೈ ಹಿಡಿದ್ದಾನೆ, ಅಷ್ಟೆ ಅಲ್ಲ ಸಪ್ತ ಪದಿ ತುಳಿದು ಬಾಳಸಂಗಾತಿಯನ್ನಾಗಿ ಮಾಡಿಕೊಂಡಿದ್ದಾನೆ. 

ಮಿರಿಮಿರಿ ಮಿಂಚುವ ಜರತಾರಿ ಸೀರೆಯಲ್ಲಿ ಕಂಗೊಳಿಸಿದ ಚೀನಾ ಚೆಲುವೆಯನ್ನು ಮಧ್ಯಪ್ರದೇಶದ ಹೈದ ವರಿಸಿದ್ದಾನೆ. ಆ ಮೂಲಕ ಕೊರೋನಾವೈರಸ್ ಬೀತಿಗೆ ಗೋಲಿ ಹೊಡೆದಿದ್ದಾನೆ.!!

ಮಧ್ಯಪ್ರದೇಶದ  ಭಾನುವಾರ ಮಾಂಡ್‌ಸೌರ್‌ನಲ್ಲಿ ನಡೆದ ವಿವಾಹದಲ್ಲಿ  ಭಾರತೀಯ ಪುರುಷರ ಜೊತೆ ಚೀನಾದ ಮಹಿಳೆ  ಮದುವೆಯಾಗಿ ಕೊರೋನಾವೈರಸ್ ಕಾಲವೋ, ಇಲ್ಲ  ಮಿಲನ  ರಮ್ಯ ಚೈತ್ರ ಕಾಲವೋ..!! ಎಂಬ ಕೂತುಹಲ ಮತ್ತು ಅಚ್ಚರಿಗೂ ಈ ಅಪರೂಪದ ದಂಪತಿ ಕಾರಣವಾಗಿದ್ದಾರೆ.! ಚೀನಾದಲ್ಲಿ 300ಕ್ಕೂ ಹೆಚ್ಚು ಜೀವಗಳನ್ನುಬಲಿ ಪಡೆದಿರುವ ಕೊರೋನಾವೈರಸ್ ಬೀತಿ ವಿಶ್ವವನ್ನೂ ಆವರಿಸಿಕೊಂಡ ಸಮಯದಲ್ಲೇ ಈ ಮದುವೆ ಹಲವರ ಹುಬ್ಬೇರು ಮಾಡುವಂತೆ ಮಾಡಿದೆ. 

ಮದುಮಗಳು ಜಿಹಾವೊ ವಾಂಗ್ ಮತ್ತು ಅವರ ಕುಟುಂಬ ಬುಧವಾರ ಮಾಂಡ್‌ಸೌರ್‌ಗೆ ಆಗಮಿಸಿದಾಗಿನಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳ  ಆರು ವೈದ್ಯರು  ಜಿಹಾವೊ ಅವರ ಕುಟುಂಬದ  ಸದಸ್ಯರನ್ನು ಸತತವಾಗಿ  ಪರೀಕ್ಷಿಸುತ್ತಿದೆ ಎಂದು ಮಾಂಡ್ಸೌರ್ ಜಿಲ್ಲಾ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಕೆ.ಮಿಶ್ರಾ ತಿಳಿಸಿದ್ದಾರೆ.  ಆದರೆ ಅವರಲ್ಲಿ  ಕರೋನವೈರಸ್ ಯಾವುದೇ ಲಕ್ಷಣ ಕಂಡುಬಾರದೆ ಇದ್ದರೂ  ಇದನ್ನು ಮುನ್ನೆಚ್ಚರಿಕೆ ಕ್ರಮವಾಗಿ ಮಾಡುತ್ತಿದ್ದೇವೆ. ನಾವು ಯಾವುದೇ ರೋಗಲಕ್ಷಣವನ್ನು ಕಂಡ ತಕ್ಷಣ ನಾವು ಅವರನ್ನು ಆಸ್ಪತ್ರೆಗೆ ದಾಖಲಿಸುತ್ತೇವೆ 'ಎಂದೂ ಡಾ ಮಿಶ್ರಾ ಹೇಳಿದರು.

ಭಾರತ ಸೇರಿದಂತೆ 25 ದೇಶಗಳಿಗೆ ಸೋಂಕು  ಹರಡಿರುವ ಏಕಾಏಕಿ ದೃಷ್ಟಿಯಿಂದ ಭಾರತ ಭಾನುವಾರ ಚೀನಾ ಪ್ರಯಾಣಿಕರು ಮತ್ತು ಚೀನಾ ಮೂಲದ ವಿದೇಶಿಯರಿಗೆ ಇ-ವೀಸಾ ಸೌಲಭ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಕೆನಡಾದಲ್ಲೇ  ಓದುವಾಗಲೇ  ಚೀನಾ  ಹುಡುಗಿ  ಮತ್ತು  ಮಧ್ಯಪ್ರಧೇಶದ ಸತ್ಯಾರ್ಥಿ ಮಿಶ್ರಾ ನಡುವೆ ಪ್ರೇಮ  ಪ್ರಕರಣ  ಬೆಳೆದಿತ್ತು ಅದು ನಂತರ ಚೀನಾದಲ್ಲೀ  ಮತ್ತಷ್ಟು ಬಲಿತು ಪಕ್ಷವಾಗಿತ್ತು ಈಗ ಮತ್ತಷ್ಟೂ ಪರಿಪಕ್ವಾವಾಗಿ  ಮಧ್ಯಪ್ರದೇಶದಲ್ಲಿ ವಿವಾಹದೊಂದಿಗೆ  ಅಂತ್ಯವಾಗಿದೆ.
 
ಮದುವೆಗೆ ಚೀನಾದಿಂದ  ಹುಡುಗಿ ತಂದೆ  ತಾಯಿ ಕೆಲವು ವು ಆಪ್ತ ನೆಂಟರು ಬಂದಿದ್ದಾರೆ ಇನ್ನು ಹುಡುಗಿ ಮನೆಯ ಕಡೆಯವರು ಮದುವೆಗೆ ಬರಬೇಕಿತ್ತು ಆದರೆ ಅವರಿಗೆ ವೀಸಾ ಸಮಸ್ಯೆಯಾಗಿ ಮದುವೆಗೆ ಬರಲಿಲ್ಲ . ಆದರೆ  ಮದುವೆ ಮಾತ್ರ ನಿಲ್ಲಲಿಲ್ಲ. ಅದೂ  ಕರೋನೊ ವೈರಸ್ ಬೀತಿಯ ಕಾಲದಲ್ಲೂ ಚೈತ್ರ ಕಾಲ  ಮೆರೆದಿದೆ, ಸದ್ದಿಲ್ಲದೆ  ಮದುವೆ ಸುದ್ದಿ ಮಾಡಿದೆ. ವೈರಸ್ ಗೂ  ಗುದ್ದು ಹಾಕಿದೆ.!! ಅಪ್ಪ-ಅಮ್ಮನ ಆಶೀರ್ವಾದ ಪಡೆದು ಮದುವೆಯಾಗಲು ಇಲ್ಲಿಯವರೆಗೆ ಕಾದಿದ್ದಾಗಿ ಚೀನಿ ಮದುವೆ ಹುಡುಗಿ ಬಹಳ ಖುಷಿಯಿಂದಲೇ ಹೇಳಿಕೊಂಡಿದ್ದಾಳೆ.

SCROLL FOR NEXT